ಬೆಂಗಳೂರು: ಸುಗ್ಗಿಯ ಹಿಗ್ಗಿನಲ್ಲಿರುವ ಸಿಲಿಕಾನ್ ಸಿಟಿ ಮಂದಿಗೆ ತೋಟಗಾರಿಕಾ ಇಲಾಖೆ ಹಾಗೂ ವೈನ್ ಬೋರ್ಡ್ (Wine Festival) ವೈನ್ ಸುಗ್ಗಿಯ ಮೂಲಕ ಹಬ್ಬದ ಸಂತಸಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ಸಂಕ್ರಾಂತಿ ಪ್ರಯುಕ್ತ ಕರ್ನಾಟಕ ವೈನ್ ಬೋರ್ಡ್ ದ್ರಾಕ್ಷಾರಸ ಉತ್ಸವವನ್ನು ಆಯೋಜಿಸಿದೆ.
ಮಲ್ಲೇಶ್ವರದ ಮಂತ್ರಿಮಾಲ್ ಮುಂಭಾಗದಲ್ಲಿ ಆಯೋಜಿಸಲಾಗಿರುವ ದ್ರಾಕ್ಷಾರಸ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಉತ್ಸವದಲ್ಲಿ ಬಗೆ ಬಗೆಯ ದ್ರಾಕ್ಷಾರಸಗಳು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿರುವ ಸಿಲಿಕಾನ್ ಸಿಟಿ ಮಂದಿ, ದ್ರಾಕ್ಷಾರಸ ಉತ್ಸವದಲ್ಲಿ ಭಾಗಿಯಾಗಿ ಮತ್ತಷ್ಟು ಖುಷಿಪಡುತ್ತಿದ್ದಾರೆ.
ರಾಜ್ಯದ ದ್ರಾಕ್ಷಿ ಬೆಳೆಗಾರರನ್ನು ಪ್ರೋತ್ಸಾಹಿಸಲು ಈ ಮೇಳ ಆಯೋಜನೆ ಮಾಡಲಾಗಿದ್ದು, ಇಲ್ಲಿ ವಿವಿಧ ಬಗೆಯ ದ್ರಾಕ್ಷಾರಸಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ದ್ರಾಕ್ಷಾರಸ ಸೇವಿಸಿ ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ದ್ರಾಕ್ಷಿ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ರವಿನಾರಾಯಣರೆಡ್ಡಿ, ಇದು ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗಲಿದೆ ಎಂದರು.
ದ್ರಾಕ್ಷಿಯನ್ನ ತುಳಿದು ವೈನ್ಪ್ರೊಸೆಸಿಂಗ್ನಲ್ಲಿ ಸಿಟಿ ಮಂದಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು. ವೀಕೆಂಡ್ ಜೋಶ್‌ಗೆ ಸಂಕ್ರಾಂತಿ ಸಂಭ್ರಮ ಕೈಜೋಡಿಸಿದ್ದರೆ, ಮತ್ತೊಂದು ಕಡೆ ದ್ರಾಕ್ಷಾರಸ ಉತ್ಸವ ಮತ್ತಷ್ಟು ಕಿಕ್ ನೀಡುತ್ತಿದೆ.
ಇದನ್ನೂ ಓದಿ | Naatu Naatu | ‘ನಾಟು ನಾಟು’ ಅಲ್ಲ, ’ನೋ ಟು ನೋ ಟು’; ವಿಶೇಷ ರೀತಿಯಲ್ಲಿ ಎಚ್ಚರಿಕೆ ಕೊಟ್ಟ ಜೈಪುರ ಪೊಲೀಸರು