ಚಿಕ್ಕೋಡಿ: ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಮಿತಿ ಮೀರಿದೆ. ಹುಲಿ, ಚಿರತೆ, ಆನೆ, ಕರಡಿಯಂಥ ದೊಡ್ಡ ಪ್ರಾಣಿಗಳು ಮನುಷ್ಯನನ್ನು ಹೆದರಿಸಿ, ಊರೇ ಬಿಟ್ಟು ಹೋಗಬೇಕು ಎನ್ನುವ ಪರಿಸ್ಥಿತಿ ನಿರ್ಮಿಸುತ್ತಿರುವ ನಡುವೆಯೇ ಈಗ ತೋಳಗಳು (Wolf attack) ಜನರನ್ನು ಕಾಡಲು ಶುರು ಮಾಡಿವೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ತೋಳಗಳ ದಾಳಿಗೆ ೨೫ ಕುರಿಗಳು ಬಲಿಯಾಗಿವೆ. ಮಲ್ಲಪ್ಪ ಯಲ್ಲಪ್ಪ ಹಿರೇಕೋಡಿ ಎಂಬವರು ತಮಗೆ ಸೇರಿದ ಸೇರಿದ ಕುರಿಗಳನ್ನು ಬೊಮ್ಮನಾಳ ಗ್ರಾಮದ ರಬಕವಿ ತೋಟದಲ್ಲಿ ರೈತರ ಗದ್ದೆಯಲ್ಲಿ ಕೂಡಿ ಹಾಕಿದ್ದರು.
ತಡರಾತ್ರಿ ಗದ್ದೆಗೆ ಲಗ್ಗೆ ಇಟ್ಟ ತೋಳ ಕುರಿಗಳ ಮೇಲೆ ದಾಳಿ ಮಾಡಿ ಹೋಗಿದೆ. ಬೆಳೆದು ನಿಂತು ಮಾರಾಟಕ್ಕೆ ಬರುವ ಹಂತಕ್ಕೆ ಬಂದಿದ್ದ ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ಕುರಿಗಾಹಿ ಮಲ್ಲಪ್ಪ ಕಂಗಾಲಾಗಿದ್ದಾರೆ. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಇದನ್ನೂ ಓದಿ | Leopard Attack: ರಾಮನಗರದಲ್ಲಿ ಚಿರತೆ ದಾಳಿ; ಭಯದಿಂದ ಮರವೇರಿದ ಯುವತಿ ಆಯತಪ್ಪಿ ಬಿದ್ದು ಸೊಂಟ ಮುರಿತ!