Site icon Vistara News

Murder Case: ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ; ಪ್ರೀತಿ ನಿರಾಕರಿಸಿದ್ದಕ್ಕೆ 16 ಬಾರಿ ಚಾಕು ಇರಿದ ಪಾಗಲ್ ಪ್ರೇಮಿ

Murder Case

#image_title

ಬೆಂಗಳೂರು: ಮನಸೋ ಇಚ್ಛೆ ಚಾಕುವಿನಿಂದ ಇರಿದು ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಮುರಗೇಶಪಾಳ್ಯದ ಎನ್‌ಎಎಲ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಪಾಗಲ್ ಪ್ರೇಮಿ ಕೃತ್ಯ (Murder Case) ಎಸಗಿದ್ದು, ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ 16 ಬಾರಿ ಚಾಕುವಿನಿಂದ ಇರಿದು ಯುವತಿಯನ್ನು ಕೊಲೆ ಮಾಡಿದ್ದಾನೆ.

ಅಂಧ್ರಪ್ರದೇಶ ಮೂಲದ ಲೀಲಾ ಪವಿತ್ರ (26) ಕೊಲೆಯಾದವರು. ದಿವಾಕರ್ ಕೊಲೆ ಆರೋಪಿಯಾಗಿದ್ದಾನೆ. ಕಳೆದ ಐದು ವರ್ಷಗಳಿಂದ ಯುವತಿಯನ್ನು ಆರೋಪಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಹಂತಕ ದಿವಾಕರ್‌ನನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾತಿಗಾಗಿ ದೂರ ಮಾಡುತ್ತಿದ್ದಾಳೆಂದು ಕೊಲೆಗೈದ?

ಆರೋಪಿ ದಿವಾಕರ್

ಮೃತ ಲೀಲಾ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯವರು. ಹಂತಕ‌ ಕೂಡ ಆಂಧ್ರ ಪ್ರದೇಶದ ಶ್ರೀಕಾಕುಳಂ ನಿವಾಸಿಯಾಗಿದ್ದಾನೆ. ಲೀಲಾ ಒಮೇಗಾ ಹೆಲ್ತ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಹಂತಕ ದಿವಾಕರ್ ದೊಮ್ಮಲೂರು ಬಳಿ ಇರುವ ಲಾಜೀಸ್ ಹೆಲ್ತ್ ಕೇರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ತೆಲುಗು ಮೂಲದವರಾದ್ದರಿಂದ ಸಹಜವಾಗಿಯೇ ಪ್ರೀತಿ ಮೂಡಿತ್ತು. ಸುಮಾರು ಐದು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ದರು. ಆದರೆ ಕೊನೆಗೆ ಇಬರಿಬ್ಬರ ನಡುವೆ ಅಡ್ಡ ಬಂದಿದ್ದು ಜಾತಿ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಲೀಲಾ, ದಿವಾಕರ್‌ನಿಂದ ಅಂತರ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಇದರಿಂದ ದಿವಾಕರ್ ಪ್ರಶ್ನಿಸಲು ಹೋದಾಗ ಆಕೆ ತನ್ನ ಮನೆಯಲ್ಲಿ ನಮ್ಮಿಬ್ಬರ ಜಾತಿ ಬೇರೆ ಬೇರೆ, ಹೀಗಾಗಿ ಸರಿ ಹೋಗೋದಿಲ್ಲ ಮದ್ವೆ ಬೇಡ ಎಂದಿರುವ ವಿಚಾರ ಬಾಯಿ ಬಿಟ್ಟಿದ್ದಾಳೆ.

ಆದರೆ ಇದನ್ನು ಒಪ್ಪದ ದಿವಾಕರ್ ತಾವಿಬ್ಬರು ಮದುವೇಯಾಗಲೇಬೇಕೆಂದು ಪಟ್ಟು ಹಿಡಿದಿದ್ದ. ಇನ್ನು ಇದೇ ವಿಚಾರವಾಗಿ ಸೋಮವಾರ ತನಗೆ ಸಿಗದ ಪ್ರೀತಿ ಯಾರಿಗೂ ಸಿಗಬಾರದೆಂಬ ಉದ್ದೇಶದಿಂದ ಎರಡು ಚಾಕುವನ್ನು ಖರೀದಿ ಮಾಡಿದ್ದ. ಮೊದಲು ಮನವೊಲಿಸಿ ಒಪ್ಪದಿದ್ದಲ್ಲಿ ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಎನ್ನಲಾಗಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನ ಲೀಲಾ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಆಕೆಯನ್ನು ಹೊರ ಕರೆಸಿಕೊಂಡಿದ್ದ. ಹೆಚ್ಚು ಕಮ್ಮಿ ಮೂರು ಗಂಟೆವರೆಗೂ ಆಕೆಯನ್ನು ಮನವೊಲಿಸೋ ಪ್ರಯತ್ನ ಮಾಡಿದ್ದ. ಆದರೆ ಲೀಲಾ ತನ್ನ ಪೋಷಕರ ಮಾತೇ ಅಂತಿಮ ಎಂದು ಹೇಳಿದಾಗ ಕ್ರೋದಗೊಂಡ ದಿವಾಕರ್ ಆಕೆಯನ್ನು ಮನಸೋ ಇಚ್ಛೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದೆ. ಆದರೆ ಧೈರ್ಯ ಸಾಲಲಿಲ್ಲ ಎಂದು ಪೊಲೀಸರ ಮುಂದೆ ಆರೋಪಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ | Dargah Collapse: ತೆರವು ಮಾಡುವಾಗ ದರ್ಗಾ ಕಟ್ಟಡ ಕುಸಿದು ಒಬ್ಬ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

Exit mobile version