Site icon Vistara News

Suicide Case: ಜಾತಕ ಪ್ರಭಾವದಿಂದ ಹೆಂಡತಿಯನ್ನು ಬಲಿ ಕೊಟ್ಟ ಗಂಡ; ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

Suicide Case

#image_title

ಬೆಂಗಳೂರು: ಕಳೆದ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ, ಗಂಡ ತನ್ನ ಜತೆ ಸಂಸಾರ ನಡೆಸದೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆಗೆ (Suicide Case) ಶರಣಾಗಿರುವ ಘಟನೆ ನಗರದ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಗೆಹಳ್ಳಿಯ ಸಾಯಿ ಲೇಔಟ್‌ನಲ್ಲಿ ನಡೆದಿದೆ.

‌ಮೂಲತಃ ಕೆಜಿಎಫ್ ತಾಲೂಕಿನ ಪೆದ್ದಪ್ಪಲ್ಲಿ ಗ್ರಾಮದ ಮೃತ ರಾಣಿ (27) ಮೃತ ಮಹಿಳೆ. ಈಕೆ ಕೋಲಾರ ಜಿಲ್ಲೆಯ ದೊಡ್ಡ ಮುದ್ದೇನಹಳ್ಳಿ ಗ್ರಾಮದ ಜೀವನ್ ಕುಮಾರ್ ಎಂಬಾತನ ಜತೆ ಮದುವೆಯಾಗಿದ್ದರು. ಸೋಮವಾರ ಕೆ.ಆರ್.ಪುರ ಸಮೀಪದ ಸೀಗೆಹಳ್ಳಿಯ ಅಕ್ಕನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಡೆತ್‌ ನೋಟ್‌ನಲ್ಲಿ ಗಂಡನ ಮನೆಯವರಿಂದ ಮಾನಸಿಕ, ದೈಹಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಹಿಳೆ ಬರೆದಿದ್ದಾರೆ.

ಮೃತ ಮಹಿಳೆ ಕುಟುಂಬಸ್ಥರು, ಆಕೆಯ ಗಂಡ ಹಾಗೂ ಕುಟುಂಬದವರು ಮಾನಸಿಕ ಹಾಗೂ ದೈಹಿಕ ಹಿಂಸೆ ಜತೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರೆಂದು ಮಹಿಳೆ ಗಂಡ ಜೀವನ್ ಕುಮಾರ್, ಮಾವ ಆವಣಿ ಪಿಡಿಒ ವರದರಾಜ, ಅತ್ತೆ ನಿರ್ಮಲ ಹಾಗೂ ಗಂಡನ ಸಹೋದರರಾದ ವಿವೇಕ್ ಕುಮಾರ್ , ಮಧುಸೂದನ್ ಸೇರಿ ಐವರ ವಿರುದ್ಧ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಮೃತಳ ಗಂಡನ ಜಾತಕದ ಪ್ರಕಾರ ಮೊದಲ ಹೆಂಡತಿ ಮದುವೆ ನಂತರ ಮರಣ ಹೊಂದುತ್ತಾಳೆಂದು ಜಾತಕ ಹೇಳಿದ್ದರಿಂದ ರಾಣಿಯನ್ನು ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ | Suicide Case : ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯಲ್ಲಿದ್ದ ಪಬ್‌ನಿಂದ ಜಿಗಿದು ಯುವಕ ಸಾವು!

ಆಕೆಯೊಂದಿಗೆ ಅನ್ಯೋನ್ಯವಾಗಿ ಸಂಸಾರ ನಡೆಸದೆ ಪ್ರತಿನಿತ್ಯ ನೀನು ಸುಂದರವಾಗಿಲ್ಲ, ನಿನ್ನೊಂದಿಗೆ ನಾನು ಬಾಳ್ವೆ ಮಾಡಲು ಸಾಧ್ಯವಿಲ್ಲವೆಂದು 15 ದಿನಗಳ ಹಿಂದೆ ತವರು ಮನೆಗೆ ಕಳುಹಿಸಿದ್ದ. ನಂತರ ಇತ್ತೀಚೆಗೆ ವಿಚ್ಛೇದನ ನೋಟಿಸ್ ನೀಡಿದ್ದಾನೆ. ಇದರಿಂದ ಮನನೊಂದ ರಾಣಿ ರೂಂನಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಘಟನೆ ನಂತರ ಮೃತಳ ಪತಿ ಹಾಗೂ ಕುಟುಂಬಸ್ಥರು ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಂಡನ ಮನೆ ಎದುರು ಶವವಿಟ್ಟು, ಪೋಷಕರ ಪ್ರತಿಭಟನೆ

ವರದಕ್ಷಿಣೆ ಕಿರುಕುಳದಿಂದ ರಾಣಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಆಕೆಯ ಗಂಡನ ಮನೆ ಎದುರು ಶವವಿಟ್ಟು ಪೋಷಕರ ಪ್ರತಿಭಟನೆ ನಡೆಸಿದರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೊಡ್ಡಮಾದೇನಹಳ್ಳಿ ಗ್ರಾಮದಲ್ಲಿ ಪೋಷಕರು ಪ್ರತಿಭಟನೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಮೃತ ಮಹಿಳೆ ಕುಟುಂಬಸ್ಥರಿಂದ ಮಾಹಿತಿ ಪಡೆದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Exit mobile version