ಬೆಂಗಳೂರು: ನಗರದ ಚಾಲುಕ್ಯ ಸರ್ಕಲ್‌ನ ಎಚ್‌ಪಿ-3 ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಪ್ರಕರಣ ಭಾನುವಾರ ಸಂಜೆ ನಡೆದಿದೆ.
ಸಂಜಯನಗರದ ಸಾಫ್ಟ್‌ವೇರ್ ಎಂಜಿನಿಯರ್ ಅರವಿಂದ್ ಮತ್ತು ತೇಜು ಕೌಶಿಕ್ ದಂಪತಿಯ ಪುತ್ರಿ ಪ್ರಕೃತಿ (17) ಮೃತ ಯುವತಿ. ಈಕ ಸೋಫಿಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ. ಯುವತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ.
ಭಾನುವಾರ ಸಂಜೆ 6.30ಕ್ಕೆ ಘಟನೆ ನಡೆದಿದ್ದು, 10ನೇ ಮಹಡಿಯಿಂದ ಹಾರಿದ ಯುವತಿಯು ಕೆಳಗೆ ಇದ್ದ ಕಾರಿನ ಮೇಲೆ ಬಿದ್ದಿದ್ದಾಳೆ. ಅಷ್ಟು ಎತ್ತರದಿಂದ ಬಿದ್ದಿದ್ದರಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಮುನ್ನ ಯುವತಿ ಹಿಂದಿಯಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಳು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳಿದ್ದಾರೆ.
ಇದನ್ನೂ ಓದಿ | Road Accident: ಹಾವೇರಿಯಲ್ಲಿ ರಸ್ತೆ ಅಪಘಾತ, ಮಹಿಳೆ ಸಾವು; ಬೆಂಗಳೂರಿನಲ್ಲಿ ವಾಹನ ಸವಾರರು ಪವಾಡಸದೃಶ ಪಾರು
ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲಿಗೆ ಯುವತಿ ಎಚ್‌ಪಿ-3 ಅಪಾರ್ಟ್‌ಮೆಂಟ್ ಮುಂಭಾಗದ ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾಳೆ. ಇದು ಸಾಧ್ಯವಾಗದ ಕಾರಣಕ್ಕೆ ಮತ್ತೊಂದು ಅಪಾರ್ಟ್‌ಮೆಂಟ್‌ಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.