ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸಿಡಿಲು ಬಡಿದು ಮಹಿಳೆ ಮೃತಪಟ್ಟಿರುವ ಘಟನೆ (Rain News) ನಡೆದಿದೆ. ಲಕ್ಷ್ಮೀಬಾಯಿ (28) ಮೃತ ದುರ್ದೈವಿ. ಕುರಿಗಳಿಗೆ ಮೇವು ತರಲು ಹೋದಾಗ ಮರದಡಿ ಮೇವು ಆರಿಸುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಹಿಳೆ ಕೊನೆಯುಸಿರೆಳೆದಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪುರದಲ್ಲಿ ಸಿಡಿಲು ಬಡಿದು ರೈತ ಮೃತ್ಯು
ಕಲಬುರಗಿ: ಸಿಡಿಲು ಬಡಿದು ರೈತ ಮೃತಪಟ್ಟಿರುವ ಘಟನೆ ಅಫಜಲಪುರ ತಾಲೂಕಿನ ರೇವೂರ(ಬಿ) ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಾಳಪ್ಪ ದತ್ತಪ್ಪ ಪೂಜಾರಿ (32) ಮೃತರು. ಗ್ರಾಮದ ಹೊರವಲಯದ ದರ್ಗಾ ಬಳಿಯ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತರ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೇವೂರ (ಬಿ) ಠಾನಣೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ಕಲಬುರಗಿ: ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಬಸಯ್ಯ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇದನ್ನೂ ಓದಿ | Rain News: ರಾಜ್ಯದಲ್ಲಿ ಆರ್ಭಟಿಸಿದ ವರುಣ; ಬಳ್ಳಾರಿಯಲ್ಲಿ ಸಿಡಿಲು ಬಡಿದು ರೈತ ಸಾವು
ಸೊಲ್ಲಾಪುರ- ಹೈದರಾಬಾದ್ ಮಾರ್ಗದ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು
ಕಳೆದ ನಾಲ್ಕು ವರ್ಷದಿಂದ ಸೊನ್ನ ಗ್ರಾಮದ ಮಠದ ಶಾಲೆಯಲ್ಲಿ ಕಾರ್ಯರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಾನಸಿಕವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ವಿಜಯಪುರದಲ್ಲಿ ಟಿವಿ ಶೋರೂಂ ನಡೆಸಿ ನಷ್ಟ ಅನುಭವಿಸಿದ್ದ ಇವರು, ನಂತರ ಮಠದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.