Site icon Vistara News

Wall collapse : ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದು ಮಹಿಳೆ ದುರ್ಮರಣ

Wall collapse

#image_title

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದು ಮಹಿಳೆಯೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (50) ಎಂಬ ಮಹಿಳೆಯೇ ಕುಸಿದ ಗೋಡೆಯ ಕಲ್ಲುಗಳಡಿ ಸಿಲುಕಿ ಪ್ರಾಣ ಕಳೆದುಕೊಂಡ ದುರ್ದೈವಿ.

ತೀರಾ ಬಡವರಾಗಿರುವ ಸಾವಿತ್ರಮ್ಮ ಜೀವನದ ಆಸರೆಯಾಗಿ, ಬದುಕುವುದಕ್ಕಾಗಿ ಶೆಡ್‌ ರೀತಿಯಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಆದರೆ, ದುರದೃಷ್ಟಕ್ಕೆ ಆ ಮನೆಯೇ ಅವರಿಗೆ ಮುಳುವಾಯಿತು. ಶೆಡ್‌ನ ಗೋಡೆ ಕುಸಿದು ಅದರ ಇಟ್ಟಿಗೆಗಳು ಅವರ ಮೇಲೆ ಬಿದ್ದು ಅವರು ಒದ್ದಾಡಿದ್ದಾರೆ.

ಮನೆಯ ಒಳಗಡೆ ಮಲಗಿದ್ದ ವೇಳೆ ಇದ್ದಕ್ಕಿದ್ದಂತೆಯೇ ಗೋಡೆ ಕುಸಿತ ಸಂಭವಿಸಿದೆ, ತಕ್ಷಣ ಅಕ್ಕಪಕ್ಕದವರು ಗೋಡೆ ಕೆಳಗೆ ಸಿಲುಕಿದ್ದ ಸಾವಿತ್ರಮ್ಮನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಅವರು ದಾರಿ ಮಧ್ಯೆ ಪ್ರಾಣ ಕಳೆದುಕೊಂಡರು.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident : ನಿಯಂತ್ರಣ ತಪ್ಪಿ ಮನೆಯ ಮೇಲೆಯೇ ಉರುಳಿದ ಟ್ರ್ಯಾಕ್ಟರ್‌; ಅಡುಗೆ ಮನೆಯಲ್ಲಿದ್ದ ತಾಯಿ, ಮಗು ಪಾರು

Exit mobile version