ಅಂಕೋಲಾ: ಯಾದಗಿರಿ ಜಿಲ್ಲೆಯ ಹುಣಸಗಿಯ ಎಸ್. ಕೆ. ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅಂಗಡಿಬೈಲ್‌ನ ಯುವತಿ ಮೃತಪಟ್ಟಿದ್ದು, ಸಾವಿನ ಕುರಿತಂತೆ ಸಂಶಯಗಳು (Suspicious Death) ವ್ಯಕ್ತವಾಗಿವೆ. ಹೀಗಾಗಿ ಯುವತಿಯ ಮನೆಯವರು ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಅಂಕೋಲಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅಂಗಡಿಬೈಲ್ ನಾಕಮನೆ ನಿವಾಸಿ ನಿವೇದಿತಾ ನರಸಿಂಹ ಭಟ್ಟ (24) ಮೃತ ದುರ್ದೈವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ ಪದವಿ ಚಿನ್ನದ ಪದಕ ವಿಜೇತೆಯಾಗಿದ್ದ ಈಕೆ, ಕಳೆದ ಎರಡು ವರ್ಷಗಳಿಂದ ಹುಣಸಗಿಯಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಜೂನ್ ತಿಂಗಳಲ್ಲಿ ಐಎಎಸ್ ಬರೆಯಲು ತಯಾರಿ ನಡೆಸುತ್ತಿದ್ದ ಯುವತಿ ಮೃತ ಪಟ್ಟಿರುವುದಾಗಿ ಮೃತಳ ತಂದೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ನಂತರ ಸುಮಾರು ಹತ್ತಿಪ್ಪತ್ತು ಜನ ಸೇರಿ ವಾಹನದಲ್ಲಿ ಯುವತಿಯ ಮೃತ ದೇಹವನ್ನು ಅಂಗಡಿಬೈಲಿಗೆ ತಂದು ಮನೆಯವರಿಗೆ ಒಪ್ಪಿಸಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಾವಿನ ಕುರಿತಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಸಂಶಯಗೊಂಡು ಇದು ಅಸಹಜ ಸಾವಾಗಿದ್ದು, ತನಿಖೆ ನಡೆಸುವಂತೆ ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.
ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Heatwaves In Bengaluru: ಬೆಂಗಳೂರಲ್ಲಿ ಬಿಸಿಲ ಬೇಗೆ; ತತ್ತರಿಸಿರುವ ಪೌರಕಾರ್ಮಿಕರಿಗೆ ಅರ್ಧ ದಿನ ರಜೆಗೆ ಎಐಸಿಸಿಟಿಯು ಒತ್ತಾಯ
ಕಡಬದ ಬಿಳಿನೆಲೆಯಲ್ಲಿ ಆಲ್ಟೋ-ತೂಫಾನ್ ಮುಖಾಮುಖಿ ಡಿಕ್ಕಿ; ಮಗು ಸೇರಿ ನಾಲ್ವರು ಮೃತ್ಯು, ಹಲವರು ಗಂಭೀರ
ದಕ್ಷಿಣ ಕನ್ನಡ (ಕಡಬ): ಇಲ್ಲಿನ ಕಡಬದ ಬಿಳಿನೆಲೆ ಸಮೀಪ ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ತೂಫಾನ್ ವಾಹನದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆಲ್ಟೋ ಕಾರಲ್ಲಿದ್ದ ಇಬ್ಬರು ಪುರುಷರು ಸೇರಿದಂತೆ ಮಹಿಳೆ ಮತ್ತು ಒಂದು ಮಗುವೊಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಮೃತರು ಬೇಲೂರು ಮೂಲದವರು ಎಂದು ತಿಳಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ತೂಫಾನ್ ವಾಹನವು ಹಾಸನ ಕಡೆಯದ್ದು ಎನ್ನಲಾಗಿದೆ. ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೆ ಅತಿ ವೇಗದ ಚಾಲನೆ ಕಾರಣವೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Assault Case: ಆಸ್ಪತ್ರೆಯಲ್ಲಿ ಯುವಕರ ದಾಂಧಲೆ; ತಮಗಿಂತ ಮೊದಲು ಹೋಗಿದ್ದಕ್ಕೆ ದಂಪತಿ ಮೇಲೆ ಹಲ್ಲೆ
ರಸ್ತೆ ಅಪಘಾತದಲ್ಲಿ ಸವಾರ ಮೃತ್ಯು
ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ. ಮೈಸೂರು ತಾಲೂಕಿನ ಕಡಕೊಳ ಬಳಿ ಸವಾರರೊಬ್ಬರು ತಮ್ಮ ಸ್ಕೂಟರ್ ಬಳಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಒಮಿನಿಯೊಂದು ಮೊದಲು ಬ್ಯಾರಿಕೇಡ್‌ಗೆ ಗುದ್ದಿ, ನಂತರ ಸ್ಕೂಟರ್, ಕಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಗುರುತು ಪತ್ತೆ ಆಗಿಲ್ಲ. ಇತ್ತ ಒಮಿನಿ ಚಾಲಕ ಗಾಯಗೊಂಡಿದ್ದು, ಒಳಗೆ ಸಿಲುಕಿ ನರಳಾಡುತ್ತಿದ್ದವನನ್ನು ಸ್ಥಳೀಯರು ರಕ್ಷಿಸಿದ್ದಾರೆ.