ಬೆಂಗಳೂರು: ರಾಜಧಾನಿಯ ದೀಪಾಂಜಲಿ ನಗರದಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ (Woman suicide). ಇದು ಒಂದು ಕೊಲೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದಾರೆ.
ದೀಪಾಂಜಲಿನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ಸೈಫ್ ಆಲಿ ಎಂಬವರ ಪತ್ನಿ ಝೈದಾ(22) ಅವರು ಪ್ರಾಣ ಕಳೆದುಕೊಂಡವರು. ಮೂರು ವರ್ಷಗಳ ಹಿಂದೆ ಸೈಫ್ ಅಲಿ ಮತ್ತು ಝೈದಾ ಮದುವೆ ನಡೆದಿತ್ತು.
ಸಂಶಯ ಯಾಕೆ?
ಝೈದಾ ಅವರ ಶವ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಝೈದಾ ಅವರ ಕೈಯನ್ನು ಕೊಯ್ದು ರಕ್ತ ಹರಿದು ಹೋಗಿದೆ. ಗಂಡ ಸೈಪ್ ಅಲಿಯೇ ಕೈಯನ್ನು ಕೊಯ್ದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ನೇಣಿಗೆ ಹಾಕಿದ್ದಾನೆ ಎಂದು ಹೆತ್ತವರು ಆರೋಪಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪತಿ ಸೈಫ್ ಅಲಿ ವಿರುದ್ದ ಕೇಸು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Suicide Case | ಹಾಲಿನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಒಂದು ಮಗು ಸಾವು, ಇನ್ನೊಂದು ಗಂಭೀರ