Site icon Vistara News

ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌; ಖಾಸಗಿ ಆಸ್ಪತ್ರೆ ಎಡವಟ್ಟಿಗೆ ಕಣ್ಣು‌ ಕಳೆದುಕೊಂಡ ಮಹಿಳೆ!

HIGH dose injection

ಬೀದರ್: ಕೃತಕ ಗರ್ಭಧಾರಣೆ ಮಾಡುವುದಾಗಿ ಹೇಳಿ ಖಾಸಗಿ‌ ಆಸ್ಪತ್ರೆಯೊಂದು ಮಹಿಳೆಯರ ಜೀವದ ಜೊತೆ ಜೆಲ್ಲಾಟವಾಡಿರುವುದು ಬೀದರ್‌ನಲ್ಲಿ ನಡೆದಿದೆ. ಹೈ ಡೋಸ್ ಇಂಜೆಕ್ಷನ್‌ನಿಂದ ಮಹಿಳೆಯೊಬ್ಬರು ಕಣ್ಣು (eyesight) ಕಳೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮಹಿಳೆ ಮನವಿ ಮಾಡಿದ್ದಾರೆ.

ಬೀದರ್ ನಗರದ ವಿಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವಿಜಯಪುರ ಮೂಲದ ವಂದನಾ ನಾಗರಾಜ‌ ಎಂಬುವವರು ನೊಂದ ಮಹಿಳೆಯಾಗಿದ್ದು, ಆಸ್ಪತ್ರೆಯಲ್ಲಿ ಹೈ ಡೋಸ್ ಇಂಜೆಕ್ಷನ್ ನೀಡಿದ್ದರಿಂದ ಕಣ್ಣು‌ ಕಳೆದು ಕೊಂಡೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ತೆಲಂಗಾಣ ಮೂಲದ ಕವಿತಾ ಹಾಗೂ ಸೀಮಾ ಬೇಗಂ ಎಂಬ ಮಹಿಳೆಯರಿಗೂ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬಂಜೆತನ ನಿವಾರಣೆ ಹೆಸರಿನಲ್ಲಿ ಆಸ್ಪತ್ರೆ ಲಕ್ಷ ಲಕ್ಷ ಹಣ ಪೀಕುತ್ತಿದೆ. ಹೈಡೋಸ್ ಇಂಜೆಕ್ಷನ್‌ನಿಂದ‌ ಕಣ್ಣು ಕಳೆದುಕೊಂಡಿದ್ದು, ನ್ಯಾಯ ಕೊಡಿಸಬೇಕು ಎಂದು ನೊಂದ‌ ಮಹಿಳೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ನಿವಾಸಿ ವಂದನಾ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

ತೆಲಂಗಾಣ ಮೂಲದ ಇಬ್ಬರು ಮಹಿಳೆಯರಿಗೂ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತನಿಖೆ ನಡೆಸಿ‌ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜ್ಞಾನೇಶ್ವರ್ ನಿರಗೂಡೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Exit mobile version