ಬಾಗಲಕೋಟೆ: ದನ ಮೇಯಿಲು ತೇರದಾಳ ಪುರಸಭಾ ಕಚೇರಿಯ ಹಿಂದೆ ಹೋಗಿದ್ದ ಮಹಿಳೆಯೊಬ್ಬರಿಗೆ ಅಪಚಿರಿತರು ಚೂರಿಯಿಂದ ಇರಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಿಳೆಯ ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ.
ಕಸ್ತೂರಿ ನಾಗಪ್ಪ ಹೊಸಟ್ಟಿ (53) ಮೃತ ದುರ್ದೈವಿ. ಅವರು ದನ ಮೇಯಿಸಲು ಹೋಗಿದ್ದಾಗ ಯಾರೋ ಅಪರಿಚಿತರು ಆಕೆಯ ಮೇಲೆ ದಾಳಿ ಮಾಡಿದ್ದಾರೆ. ಆಕೆ ಬೊಬ್ಬೆ ಹೊಡೆಯುವುದನ್ನು ಗಮನಿಸಿ ಯಾರೋ ಹೋಗಿ ರಕ್ಷಿಸಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಕೂಡಲೇ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ದಾರಿ ಮಧ್ಯೆ ಆಕೆ ಪ್ರಾಣ ಕಳೆದುಕೊಂಡರು. ಈ ಚಾಕು ಇರಿತ ಘಟನೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ ಹೆಚ್ಚಿದ ತಾಪಮಾನ: ರಕ್ಷಿತಾರಣ್ಯದಲ್ಲಿ ಭಾರಿ ಬೆಂಕಿ
ಮಂಗಳೂರು: ಕರಾವಳಿಯಲ್ಲಿ ಹೆಚ್ಚಿದ ತಾಪಮಾನದಿಂದಾಗಿ ರಕ್ಷಿತಾರಣ್ಯದಲ್ಲಿ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದೆ. ಶಿವಾರು ರಕ್ಷಿತಾರಣ್ಯದ ಹಳೆನೇರಂಕಿ ಭಾಗದಲ್ಲಿ ಕಂಡು ಬಂದ ಬೆಂಕಿ ನಿಯಂತ್ರಣಕ್ಕೆ ಬಾರದ ಮಟ್ಟದಲ್ಲಿ ಹರಡುತ್ತಿದೆ. ಅಗ್ನಿಶಾಮಕ, ಅರಣ್ಯ ಇಲಾಖೆ ಮತ್ತು ಸ್ಥಳೀಯರಿಂದ ಬೆಂಕಿ ನಂದಿಸಲು ಹರಸಾಹಸ ನಡೆಯುತ್ತಿದೆ.
ಅರಣ್ಯ ಮಧ್ಯದ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾಗುತ್ತಿದ್ದು, ಕಾಳ್ಗಿಚ್ಚು ಅರಣ್ಯ ಸಮೀಪದ ಮನೆಗಳಿಗೂ ಹಾನಿ ಮಾಡುವ ಆತಂಕ ಎದುರಾಗಿದೆ.
ಇದೇ ವೇಳೆ, ಕಡಬ ತಾಲೂಕಿನ ಕೊಯಿಲಾ ಕೆ.ಸಿ.ಫಾರ್ಮ್ ಗುಡ್ಡಕ್ಕೂ ಬೆಂಕಿ ಬಿದ್ದಿದೆ. ವಾರದ ಹಿಂದೆ ಚಾರ್ಮಾಡಿ ಅರಣ್ಯದಲ್ಲೂ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ : Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ