ವಿಜಯನಗರ: ಅಧಿಕಾರಕ್ಕೆ ಬಂದರೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus Rides) ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಗ್ಯಾರಂಟಿ ನೀಡಿದ್ದರು. ಅದರ ಭಾಗವಾಗಿ ಮೊದಲ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಈ ನಡುವೆ ಹೊಸಪೇಟೆಯಲ್ಲಿ ಸಾರಿಗೆ ಬಸ್‌ನಲ್ಲಿ ಟಿಕೆಟ್ ತೆಗೆದೊಕೊಳ್ಳಿ ಎಂದು ಕೇಳಿದ್ದಕ್ಕೆ ಮಹಿಳೆಯೊಬ್ಬರು, ಕಾಂಗ್ರೆಸ್ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದಿರುವ ಪ್ರಸಂಗ ನಡೆದಿದೆ.
ಹೊಸಪೇಟೆಯಲ್ಲಿ ಪ್ರಯಾಣಿಸುವಾಗ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಮೊದಲಿಗೆ ನಿರ್ವಾಹಕನ ವಿರುದ್ಧ ಕಿಡಿಕಾರಿರುವ ಮಹಿಳೆ, ಹೆಣ್ಮಕ್ಕಳಿಗೆ ಬಸ್ ದರ ಫ್ರೀ ಎಂದಿದ್ದಾರಲ್ರೀ ಎಂದು ಹೇಳಿದ್ದಾರೆ. ಅದಕ್ಕೆ ಕಂಡಕ್ಟರ್ ಇನ್ನೂ ಫ್ರೀ ಟಿಕೆಟ್ ಘೋಷಣೆ ಮಾಡಿಲ್ಲ. ನಮಗೆ ಆದೇಶ ಕೂಡಾ ಬಂದಿಲ್ಲ. ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕೋಪಗೊಂಡ ಮಹಿಳೆ, ಕಾಂಗ್ರೆಸ್ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದಿದ್ದಾರೆ.
ಇದನ್ನೂ ಓದಿ | Karnataka CM: ಯಾರೂ ಅನಗತ್ಯ ಹೇಳಿಕೆ ನೀಡಬೇಡಿ, ನಾವು ನೋಡ್ಕೋತೀವಿ: ಸಿದ್ದು, ಡಿಕೆಶಿ ಬಣಕ್ಕೆ ಸುರ್ಜೆವಾಲ ಎಚ್ಚರಿಕೆ
ಮಹಿಳೆಯರಿಗೆ ಫ್ರೀ ಅಂದಾನಲ್ರೀ… ಎಂದು ಅಶ್ಲೀಲ ಪದ ಬಳಸಿ ಹಿಗ್ಗಾಮುಗ್ಗಾ ಬೈದಿರುವ ಮಹಿಳೆ, ಗಂಡ, ಮಕ್ಕಳು ದುಡಿದಿದ್ದನ್ನು ತಿನ್ನೋ ….. ಮಗ ಎಂದು ಕಾಂಗ್ರೆಸ್ ನಾಯಕನ ಬಗ್ಗೆ ಬೈದಿದ್ದಾರೆ. ಈ ವೇಳೆ ಅಕ್ಕ ಪಕ್ಕ ಕುಳಿತಿದ್ದ ಪ್ರಯಾಣಿಕರು ನಸು ನಕ್ಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿಯಲ್ಲಿ ಚುನಾವಣೆ ವೇಳೆ 39 ಪ್ರಕರಣ ದಾಖಲು, 3 ಕೋಟಿ ರೂ. ವಶ
ಬಳ್ಳಾರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 39 ಪ್ರಕರಣ ದಾಖಲಾಗಿದ್ದು, 3 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಚುನಾವಣಾ ಮತದಾನಕ್ಕೆ (ಮೇ 10) ಮೂರು ದಿನ ಮುಂಚೆ 1.20 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ತಾಲೂಕಿನ ಸಂಜೀವರಾಯನ ಕೋಟೆಯಲ್ಲಿ ನಡೆದ ಹಲ್ಲೆ ಘಟನೆ ಹಿನ್ನಲೆ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಒಟ್ಟಾರೆ 39 ಪ್ರಕರಣ ಹಾಗೂ 3 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಚುನಾವಣೆಯಲ್ಲಿ ಜಿಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಿಸೆಂಬರ್ ತಿಂಗಳನಿಂದಲೇ ಚುನಾವಣೆ ತಯಾರಿ ನಡೆಸಲಾಗಿತ್ತು. 295 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ರೌಡಿ ಎಪಿಎಂಸಿ ಗೋವಿಂದನನ್ನು ಮಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪ್ರಮುಖ ನಾಯಕರ ಸಭೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ | Karnataka CM: ಸಿದ್ದು ಪೂರ್ಣಾವಧಿ ಸಿಎಂ; ವರಿಷ್ಠರು ಹೇಳಿದ್ದನ್ನೇ ಹೇಳಿದ್ದು ಎಂದ ಎಂಬಿಪಿ; ಡಿಸ್ಟರ್ಬ್ ಆದ್ರಾ ಡಿಕೆಶಿ?
ಮತ ಎಣಿಕೆ ದಿನ ಗ್ರಾಮೀಣ ಶಾಸಕ ನಾಗೇಂದ್ರ ಮೇಲೆ ವೆಂಕಟೇಶ, ರಮೇಶ್ ಎಂಬುವವರು ತಳವಾರ್ ತೋರಿಸಿ ಹಲ್ಲೆಗೆ ಯತ್ನಿಸಿದ್ದರು. ಕುಡಿದ ಮತ್ತಿನಲ್ಲಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು.