ಚಿತ್ರದುರ್ಗ: ರಾಜ್ಯಾದ್ಯಂತ ಶಕ್ತಿ ಯೋಜನೆಗೆ (Shakti Scheme) ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಜೂನ್ 11ರಂದು ಯೋಜನೆ ಶುರುವಾಗಿ ಜೂನ್ 28ರವರೆಗೆ 222 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಯಾಣವು ಮಹಿಳೆಯರಿಂದ ಆಗಿತ್ತು. ಆದರೆ, ಈ ಬಗ್ಗೆ ಈಗ ಮಹಿಳೆಯೊಬ್ಬರು ಕೆಂಡಾಮಂಡಲವಾಗಿದ್ದಾರೆ. ಯೋಜನೆ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಸಿಕ್ಕಾಪಟ್ಟೆ ಕೂಗಾಡಿದ್ದಾಳೆ. ಅಲ್ಲದೆ, ಬಸ್ಸಲ್ಲಿ ಉಚಿತವಾಗಿ ಓಡಾಡುವ ಮಹಿಳೆಯರ ವಿರುದ್ಧವೂ ಕಿಡಿಕಾರಿದ್ದಾಳೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಚಿತ್ರದುರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮಹಿಳೆಯೊಬ್ಬಳು ಅಶ್ಲೀಲವಾಗಿ ನಿಂದಿಸಿದ್ದಾಳೆ. ಏಕವಚನ ಪ್ರಯೋಗ ಮಾಡಿದ್ದಾಳೆ. ಮಾತು ಕೊಟ್ಟಂತೆ 10 ಕೆಜಿ ಅಕ್ಕಿ ನೀಡದ ಕಾಂಗ್ರೆಸ್ ಸರ್ಕಾರ ಎಂದು ಬೈದಾಡಿದ್ದಾಳೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯನವರಿಗೆ 5 ಕೆಜಿ ಅಕ್ಕಿ ಹೆಚ್ಚಿಗೆ ನೀಡಿ ಎಂದು ಹೇಳುತ್ತಿದ್ದಾರೆ. ನನ್ನ ಅಕ್ಕಿ ಯಾಕೆ ಕೊಡ್ತೀಯಾ? ನಿಮ್ಮ ಸರ್ಕಾರದಿಂದ ಅಕ್ಕಿ ಕೊಡಿ ಅಂತಿದಾರೆ. ಇವರಿಗೆ ಇದೆಲ್ಲಾ ಬೇಕಾ? ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: Weather report : ಕರಾವಳಿಯಲ್ಲಿಂದು ಹೇಗಿರಲಿದೆ ಮುಂಗಾರು ಮಳೆ ದರ್ಬಾರ್
ಸುಮ್ಮ ಸುಮ್ಮನೇ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕೊಟ್ಟರು. ಮನೆಯಲ್ಲಿ ಗಂಡಸರನ್ನು ಬಿಟ್ಟು ಹೆಂಗಸರು ಓಡಾಡೋಕೆ ಶುರು ಮಾಡಿದರು. ಮೊನ್ನೆ ಹೆಣ್ಣು ಮಗಳೊಬ್ಬಳು ಅಲ್ಲೆಲ್ಲಿಯೋ ಬಿದ್ದರು. ಮತ್ತೊಬ್ಬರು ಕೈ ಮುರಿದುಕೊಂಡರು? ಇದಕ್ಕೆಲ್ಲ ಯಾರು ಹೊಣೆ? ಇವರ ಟ್ರೀಟ್ಮೆಂಟ್‌ಗೆ ಯಾರು ದುಡ್ಡು ಕೊಡ್ತಾರೆ? ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.
ಮನೆಯ ಯಜಮಾನ ಗಂಡಸು. ಕೂಲಿ ಮಾಡೋನು ಅವನೇ. ಅದನ್ನು ನೋಡಿ ಫ್ರೀ ಕೊಡಬೇಕಿತ್ತು. ಇವನೇನು ಗ್ಯಾಸ್ ಫ್ರೀ ಕೊಟ್ನಾ? ಮನೆಯ ಜವಾಬ್ದಾರಿ ಕಡಿಮೆ ಮಾಡೋಕೇನಾದರೂ ಕೊಟ್ಟನಾ? ಎಂದು ಸಿಎಂ ಸಿದ್ದರಾಮಯ್ಯಗೆ ಸಾರ್ವಜನಿಕವಾಗಿ ಏಕವಚನದಲ್ಲಿ ಮಹಿಳೆ ಬೈದಿದ್ದಾಳೆ. ಇದನ್ನು ಸಾರ್ವಜನಿಕರು ವಿಡಿಯೊ ಮಾಡಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ.
ಶಕ್ತಿ ಯೋಜನೆ ಬಗ್ಗೆ ಮಹಿಳೆ ಮಾತನಾಡಿದ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Video Viral : ಫ್ರೀ ಬಸ್ಸಲ್ಲಿ ಟ್ರಿಪ್‌ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ; ಬಸ್ ಚಕ್ರಕ್ಕೆ ತಲೆ ಇಟ್ಟು ಕುಡುಕನ ಕಿರಿಕ್!
ಇಷ್ಟೆಲ್ಲ ಬೈದಿರುವ ಮಹಿಳೆ ಕೊನೆಗೆ ಹೊರಗಡೆ ಸಂಚರಿಸುವಾಗ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದಳೋ? ದುಡ್ಡು ಕೊಟ್ಟು ಪ್ರಯಾಣ ಮಾಡಿದಳೋ ಎಂಬುದು ಮಾತ್ರ ತಿಳಿದಿಲ್ಲ! ಆದರೆ, ಅಂಗಡಿಯೊಂದರಲ್ಲಿ ಸಹಜವಾಗಿ ಜನರ ಜತೆ ಮಾತನಾಡುವಾಗ ತನ್ನ ಅನಿಸಿಕೆಯನ್ನು ಹೇಳಿದಂತೆ ಇದ್ದು, ಇದನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿಕೊಂಡು ಹರಿಬಿಟ್ಟಿದ್ದಾರೆ.