ಹೊಸನಗರ: ಇಲ್ಲಿನ ಬಿಳ್ಳೋಡಿ ಗ್ರಾಮದ ಮತ್ತಿಗದಲ್ಲಿ ಇಟ್ಟಕ್ಕಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ (Women Death) ಪತ್ತೆಯಾಗಿದೆ. ಮತ್ತಿಗದ ನಿವಾಸಿ ಮಂಗಳಾ (36) ಮೃತಪಟ್ಟವರು.
ಮಂಗಳಾ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾಗಿದೆ. ನವೆಂಬರ್ 03ರಂದು ಮಧ್ಯಾಹ್ನ 2:30ರ ಸುಮಾರಿಗೆ ಬಿಳ್ಳೋಡಿ ಗ್ರಾಮದಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಎಲ್ಲ ಕಡೆ ಹುಡುಕಿದರು ಪತ್ತೆಯಾಗದೆ ಇದ್ದಾಗ, ಶನಿವಾರ ಹೊಸನಗರ ಠಾಣೆಯಲ್ಲಿ ಮೃತಳ ಪತಿ ನಾಗರಾಜ್ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ, ಭಾನುವಾರ ಬೆಳಗ್ಗೆ ಮಂಗಳ ಅವರ ಮನೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಇಟ್ಟಕ್ಕಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ | Honey Bee Attack | ಶವಸಂಸ್ಕಾರಕ್ಕೆ ತೆರಳಿದವರ ಮೇಲೆ ಹೆಜ್ಜೇನು ದಾಳಿ; 40ಕ್ಕೂ ಹೆಚ್ಚು ಜನರಿಗೆ ಗಾಯ