Site icon Vistara News

Woman murder | ಹಗಲಲ್ಲೇ ಮನೆಗೆ ನುಗ್ಗಿ ಮಹಿಳೆಯ ಕತ್ತು ಸೀಳಿರುವ ಹಂತಕರು; ಮಾಸ್ಕ್‌ ಧರಿಸಿ ಬಂದಿದ್ದ ಇಬ್ಬರ ಮೇಲೆ ಖಾಕಿ ಕಣ್ಣು

murder

ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಕತ್ತು ಸೀಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ (Woman Murder) ಹತ್ಯೆ ಮಾಡಲಾಗಿದೆ. ಪಾರ್ವತಮ್ಮ (58) ಕೊಲೆಯಾದವರು.

ಶನಿವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ವತಮ್ಮ ಪತಿ ರಾಜೇಗೌಡ ಹೊರಗೆ ಹೋಗಿದ್ದು, ಮನೆಯಲ್ಲಿ ಒಬ್ಬರೇ ಇದ್ದಿದ್ದನ್ನು ತಿಳಿದು ಹಂತಕರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಪರಿಚಯಸ್ಥರೇ ಯಾರೋ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾರಣ ಹತ್ಯೆಯಾದ ಜಾಗದಲ್ಲಿ ಪಾವರ್ತಮ್ಮ ಮನೆಗೆ ಬಂದಿದ್ದವರಿಗೆ ಟೀ ಕೊಡುವ ಉದ್ದೇಶದಿಂದ ಮೂರು ಲೋಟ ಇಟ್ಟು ಟೀ ಕಾಯಿಸಿದ್ದಾರೆ. ಈ ವೇಳೆ ಹಂತಕರು ಹಿಂದಿನಿಂದ ಬಂದು ಕತ್ತು ಸಿಳಿರುವ ಸಾಧ್ಯತೆ ಇದೆ. ಒಂದು ಕಡೆ ರಕ್ತದ ಮಡುವಿನಲ್ಲಿ ಪಾರ್ವತಮ್ಮ ಇದ್ದರೆ ಮತ್ತೊಂದು ಕಡೆ ಟೀಯು ನೆಲಕ್ಕೆ ಚೆಲ್ಲಿದೆ.

ಇನ್ನು ಮಾಸ್ಕ್ ಧರಿಸಿದ್ದ ಇಬ್ಬರು, ಬೈಕ್‌ನಲ್ಲಿ ಹೋಗುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಣಕಾಸಿನ ವಿಷಯಕ್ಕೆ ಹರಿಯಿತಾ ನೆತ್ತರು
ಬೆಳಗ್ಗೆ 9 ಗಂಟೆಗೆ ಪಕ್ಕದ ಮನೆಯ ಸಾಕಮ್ಮ ಎಂಬುವವರು ‌ಪಾರ್ವತಮ್ಮ ಮನೆ ಬಳಿ ಬಂದು ಸಂಘಕ್ಕೆ ಬರಲು ಕರೆದಿದ್ದಾರೆ. ಈ ವೇಳೆ ಮನೆ ಬಾಗಿಲು ತೆರೆದಿದ್ದರೂ, ಪಾರ್ವತಮ್ಮ ನಿಂದ ಯಾವುದೇ ಉತ್ತರ ಬಂದಿಲ್ಲ. ಅನುಮಾನಗೊಂಡ ಸಾಕಮ್ಮ ಈ ವೇಳೆ ಅಕ್ಕಪಕ್ಕದವರ ಕರೆದು ಮನೆಯೊಳಗೆ ಹೋಗಿ ನೋಡಿದ್ದಾರೆ. ಹಾಲ್‌ನಲ್ಲಿ ಪಾರ್ವತಮ್ಮ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದ್ದೆ ತಡ ಪಾರ್ವತಮ್ಮರ ಪತಿಗೆ ಮತ್ತು ಮಕ್ಕಳಿಗೆ ,ಪೊಲೀಸ್ ಠಾಣೆಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದಾರೆ.

ಪಾರ್ವತಮ್ಮ – ರಾಜೇಗೌಡ ದಂಪತಿ ಮೂವರು ಗಂಡು ಮಕ್ಕಳಿದ್ದು ಅವರೆಲ್ಲ ಬೆಂಗಳೂರಿನಲ್ಲಿ ಬೇಕರಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತ ಊರಿನಲ್ಲಿ ಅವರಿಗಿದ್ದ ಹತ್ತಾರು ಎಕರೆ ಜಮೀನನ್ನು ನೋಡಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದರು. ಆದರೆ ಹಂತಕರು ಪಾರ್ವತಮ್ಮರ ಉಸಿರು ನಿಲ್ಲಿಸಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಪರಿಚಯಸ್ಥರೇ ಪಾರ್ವತಮ್ಮ ರ ಕೊಲೆ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಂದಿನಂತೆ ಬೆಳಗ್ಗೆ 7:30ಕ್ಕೆ ಡೈರಿಗೆ ಹಾಲು ಹಾಕಿ ವಾಪಸ್ ಬಂದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪತಿ ರಾಜೇಗೌಡ ಬೆಂಗಳೂರಿನಲ್ಲಿದ್ದ ಮಗನ ಮನೆಗೆ ಶುಕ್ರವಾರ ತೆರಳಿದ್ದರು. ಹೀಗಾಗಿ ಪಾರ್ವತಮ್ಮ ಒಬ್ಬಂಟಿಯಾಗಿ ಇರುವುದನ್ನು ತಿಳಿದೆ ಹತ್ಯೆ ಮಾಡಿರುವ ಸಾಧ್ಯತೆ ಇದೆ. ಹೊಳೆನರಸೀಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Sexual assault | ಮಹಿಳೆಗೆ ರೂಂ ಕೊಡಿಸಿ ಅತ್ಯಾಚಾರಕ್ಕೆ ಯತ್ನ

Exit mobile version