Site icon Vistara News

Video Viral : ಸೈದಾಪುರದಲ್ಲಿ ಸೀರೆ ಕದ್ದ ನಾರಿಯರಿಗೆ ಧರ್ಮದೇಟು!

Saree thieves thrashed in Saidapur

ಯಾದಗಿರಿ: ಸೀರೆ ಎಂದರೆ ನಾರಿಯರಿಗೆ ಬಲು ಇಷ್ಟ. ಬಟ್ಟೆ ಅಂಗಡಿಗೆ (Clothing store) ಸೀರೆ ಖರೀದಿಗೆಂದು (sarees Purchase) ಹೋದರೆ ತಮಗೆ ಇಷ್ಟವಾಗುವ ಸೀರೆ ಸಿಕ್ಕುವವರೆಗೂ ಬಿಡುವುದಿಲ್ಲ. ಒಮ್ಮೆ ಇಷ್ಟವಾಗದೇ ಇದ್ದರೆ ಬೇರೆ ಅಂಗಡಿಗೆ ಹೋಗುತ್ತಾರೆಯೇ ವಿನಃ ಅಲ್ಲಿ ಇರುವುದರಲ್ಲೇ ಒಂದನ್ನು ತೆಗೆದುಕೊಳ್ಳುವುದು ಬಹಳವೇ ವಿರಳ. ಆದರೆ, ಸೀರೆಯನ್ನು ಕೊಂಡು ತಂದರೆ ಚೆನ್ನ. ಅದೇ ಕಳ್ಳತನ ಮಾಡಿದರೆ? ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ. ನಾಲ್ವರು ಕಳ್ಳಿಯರು ಸೀರೆ ಕದಿಯಲು ಹೋಗಿ ಸಿಕ್ಕಿಬಿದ್ದಿದ್ದು, ಸರಿಯಾಗಿ ಏಟು ತಿಂದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೊ ವೈರಲ್‌ (Video Viral) ಆಗಿದೆ.

ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಬಟ್ಟೆ ಅಂಗಡಿಯೊಂದಕ್ಕೆ ನಾಲ್ವರು ಕಳ್ಳಿಯರು ಎಂಟ್ರಿ ಕೊಟ್ಟಿದ್ದಾರೆ. ಅವರು ತಮ್ಮ ಗುರುತು ಸಿಗಬಾರದು ಎಂಬ ಕಾರಣಕ್ಕೆ ಬುರ್ಖಾ ಧರಿಸಿ ಬಂದಿದ್ದರು. ಅಂಗಡಿಗೆ ಬಂದವರು ದುಬಾರಿ ಸೀರೆಗಳನ್ನೇ ಕೇಳಿದ್ದಾರೆ. ಒಂದಾದ ಮೇಲೆ ಒಂದರಂತೆ ದುಬಾರಿ ಸೀರೆಗಳನ್ನು ತೆಗೆಸಿದ್ದಾರೆ. ಹೀಗೆ ತೆಗೆಸುತ್ತಾ ಒಬ್ಬೊಬ್ಬರೂ ಸೀರೆಗಳನ್ನು ಎಗರಿಸುತ್ತಿದ್ದರು.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ನಾಳೆ ಮಳೆಯಾಟ ಸಾಧಾರಣ ; ಕರಾವಳಿಯಲ್ಲಿ ಭರ್ಜರಿ ಪ್ರದರ್ಶನ

ಆದರೆ, ಇವರ ವರ್ತನೆ ಮೇಲೆ ಅಂಗಡಿಯವರಿಗೆ ಅನುಮಾನ ಬಂದಿದೆ. ಹೀಗಾಗಿ ಒಂದು ಕಣ್ಣಿಟ್ಟಿದ್ದರು. ಆದರೆ, ಯಾವಾಗ ಅವರು ಸೀರೆಯನ್ನು ಕದಿಯುತ್ತಿರುವುದು ಗೊತ್ತಾಯಿತೋ ಆಗ ಹಿಡಿದುಕೊಂಡಿದ್ದಾರೆ. ಸೀರೆಯನ್ನು ಏಕೆ ಕದಿಯುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ, ಮೊದಲಿಗೆ ಈ ಬಗ್ಗೆ ಒಪ್ಪದ ಕಳ್ಳಿಯರು ತಾವು ಕಳ್ಳತನ ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ಆದರೆ, ಅವರ ಬಳಿ ಸೀರೆ ಇದ್ದುದನ್ನು ಸಾಬೀತು ಪಡಿಸಿದ ಮೇಲೆ ನಿರುತ್ತರರಾಗಿದ್ದಾರೆ.

ಸೀರೆ ಕದ್ದವರಿಗೆ ಥಳಿತ; ಇಲ್ಲಿದೆ ವಿಡಿಯೊ

ಹೀಗಾಗಿ ಸಿಟ್ಟಾದ ಅಂಗಡಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಥಳಿಸಿದ್ದಾರೆ. ಈ ವೇಳೆ, ತಮಗೆ ಹೊಡೆಯದಂತೆ ಗೋಗರೆದ ಕಳ್ಳಿಯರು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಕೈಮುಗಿದಿದ್ದಾರೆ. ಆದರೆ, ಅಂಗಡಿಯವರ ಸಿಟ್ಟು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಪದೇ ಪದೆ ನಾಲ್ಕೇಟು ಕೊಟ್ಟು, ಮತ್ತೆ ಕಳ್ಳತನ ಮಾಡದಂತೆ ತಾಕೀತು ಮಾಡಿದ್ದಾರೆ. ಈ ಎಲ್ಲ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ: KS Eshwarappa : ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಫುಲ್ ರಿಲೀಫ್‌

ಪೊಲೀಸರಿಗೆ ಒಪ್ಪಿಸಿದ ಅಂಗಡಿ ಮಾಲೀಕರು

ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಹೀಗಾಗಿ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Exit mobile version