Site icon Vistara News

Wonderla Offer | ಮಕ್ಕಳಂತೆ ಬಂದರೆ ದೊಡ್ಡವರಿಗೂ ಇಲ್ಲಿ ರಿಯಾಯಿತಿ ಟಿಕೆಟ್; ಏನಿದು ವಂಡರ್‌ಲಾ ಆಫರ್‌?

ಬೆಂಗಳೂರು: ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬರುವ ವಯಸ್ಕರಿಗೆ ವಂಡರ್‌ಲಾ ವತಿಯಿಂದ ವಿಶೇಷ ಆಫರ್‌ವೊಂದನ್ನು ಪ್ರಕಟಿಸಲಾಗಿದೆ. ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ವಂಡರ್‌ಲಾ ಹಾಲಿಡೇಸ್‌, ದೊಡ್ಡವರು ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬಂದರೆ, ಅವರಿಗೆ ಮಕ್ಕಳಿಗೆ ನೀಡುವ ದರದಲ್ಲಿ ಟಿಕೆಟ್‌ ನೀಡುವುದಾಗಿ ಘೋಷಿಸಿದೆ.

ಪ್ರತಿ ವಿಶೇಷ ದಿನಗಳನ್ನು ವಿಶಿಷ್ಟವಾಗಿ ಆಚರಿಸುತ್ತಾ ಬಂದಿರುವ ವಂಡರ್‌ ಲಾ ಈ ಬಾರಿ ಮಕ್ಕಳ ದಿನಾಚರಣೆಯನ್ನೂ ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿದೆ. ದೊಡ್ಡವರನ್ನು ಮಕ್ಕಳನ್ನಾಗಿಸಲು ಮುಂದಾಗಿದೆ.

ದೊಡ್ಡವರು ಚಿಕ್ಕವರಾದಾಗ!
ನವೆಂಬರ್‌ 12ರಿಂದ 14 ರವರೆಗೆ ಈ ಕೊಡುಗೆ ಚಾಲ್ತಿಯಲ್ಲಿರಲಿದೆ. ದೊಡ್ಡವರು ಮಕ್ಕಳಾಗುವುದು ಎಂದರೆ, ಚಿಕ್ಕ ಮಕ್ಕಳಿನಂತೆ ಶಾಲಾ ಸಮವಸ್ತ್ರ ಧರಿಸಿ, ಒಂದು ಕೈಯಲ್ಲಿ ಬಾಟಲ್‌, ಮತ್ತೊಂದು ಕೈಲಿ ಲಾಲಿಪಾಪ್‌ ಕ್ಯಾಂಡಿ, ಚಿಕ್ಕ ಮಕ್ಕಳ ಬ್ಯಾಗ್‌ (ಹಳೆಯ ಶೈಲಿಯಲ್ಲಿ) ಸೇರಿದಂತೆ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಹೇಗೆ ಸಿದ್ಧವಾಗುತ್ತಿದ್ದರೋ ಅದೇ ರೀತಿಯಲ್ಲಿ ಸಿದ್ಧವಾಗಿ ಬಂದವರಿಗೆ ಮಾತ್ರ ಈ ಮಕ್ಕಳ ಟಿಕೆಟ್‌ಗೆ ಅರ್ಹರಾಗಿರುತ್ತಾರೆ.

ವಯಸ್ಕರಲ್ಲಿಯೂ ಮಗುವಿನ ಮನಸ್ಸನ್ನು ಜೀವಂತವಾಗಿಡುವ ಉದ್ದೇಶದಿಂದ ಈ ಆಫರ್ ಘೋಷಿಸಿದ್ದೇವೆ ಎಂದು ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಕೆ. ಚಿಟ್ಟಿಲಪಿಳ್ಳಿ ಹೇಳಿದ್ದಾರೆ. ಮಕ್ಕಳಂತೆ ಸಿದ್ಧವಾಗಿ ಬರುವ ಮೊದಲ 1000 ಜನರಿಗೆ ಈ ಟಿಕೆಟ್‌ ಲಭ್ಯವಿರಲಿದೆ. ಹೀಗೆ ಸಿದ್ಧವಾಗಿ ಬಂದವರನ್ನು ಒಂದೆಡೆ ಸೇರಿಸಿ ಅವರಿಗೆ ವೋಚರ್‌ ನೀಡಲಾಗುವುದು, ಈ ವೋಚರ್‌ನ ಮೂಲಕ ಅವರು ಟಿಕೆಟ್‌ ಕೌಂಟರ್‌ನಲ್ಲಿ ಮಕ್ಕಳ ಟಿಕೆಟ್‌ ಪಡೆಯಬಹುದು.

ಇದಷ್ಟೇ ಅಲ್ಲದೆ ನವೆಂಬರ್ 14ರಂದು, ಚಿತ್ರಕಲಾ ಸ್ಪರ್ಧೆ, ಡೋನಟ್ ಅನ್ನು ಕ್ರೀಮ್ ಮಾಡಿ, ಕಪ್ಕೇಕ್ ಅನ್ನು ಕ್ರೀಮ್ ಮಾಡಿ ಸೇರಿದಂತೆ ಮುಂತಾದ ಮನರಂಜನಾ ಚಟುವಟಿಕೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನವೂ ಇರಲಿದೆ. ಚಟುವಟಿಕೆಗೆ ಅಗತ್ಯವಿರುವ ಎಲ್ಲ ಅಗತ್ಯ ವಸ್ತುಗಳನ್ನು ವಂಡರ್ಲಾ ಒದಗಿಸಲಿದೆ.
ಹೆಚ್ಚಿನ ವಿವರಗಳಿಗಾಗಿ ಈ ವೆಬ್‌ಸೈಟ್‌ ಮೇಲೆ ಕ್ಲಿಕ್‌ ಮಾಡಿ.

ಇದನ್ನೂ ಓದಿ | Children motivation: ಈ 10 ಸೂತ್ರಗಳು ನಿಮ್ಮ ಮಗುವನ್ನು ಖಂಡಿತಾ ಸ್ಮಾರ್ಟ್‌ ಆಗಿಸುತ್ತದೆ!

Exit mobile version