Site icon Vistara News

Workers Fall Sick: ಹಲ್ಲಿ ಬಿದ್ದ ಆಹಾರ ಸೇವಿಸಿ ಒಬ್ಬ ಕಾರ್ಮಿಕ ತೀವ್ರ ಅಸ್ವಸ್ಥ, ಹಲವರಿಗೆ ವಾಂತಿ-ಭೇದಿ

Labours fall sick

ಕಲಬುರಗಿ: ಹಲ್ಲಿ ಬಿದ್ದ ಆಹಾರ ಸೇವಿಸಿ ಒಬ್ಬ ಕಾರ್ಮಿಕ ತೀವ್ರ ಅಸ್ವಸ್ಥಗೊಂಡಿದ್ದು, ಹಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ವಾಸವದತ್ತ ಸಿಮೆಂಟ್ ಫ್ಯಾಕ್ಟರಿಯಲ್ಲಿ ನಡೆದಿದೆ. 150ಕ್ಕೂ ಅಧಿಕ ಜನರು ಮಧ್ಯಾಹ್ನ ಕ್ಯಾಂಟೀನ್‌ನಲ್ಲಿ ಊಟ ಸೇವನೆ ಮಾಡಿದ್ದು, ಈ ಪೈಕಿ ಒಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿರುವ ವಾಸವದತ್ತ ಸಿಮೆಂಟ್ ಫ್ಯಾಕ್ಟರಿಯ ಕ್ಯಾಂಟಿನ್‌ನಲ್ಲಿ ನೀಡಿದ ಆಹಾರದಲ್ಲಿ ಹಲ್ಲಿ ಪತ್ತೆಯಾಗಿದೆ. ಅನ್ನ ಸಾಂಬಾರ್ ತಿನ್ನುವಾಗ ಸಾಂಬಾರ್‌ನಲ್ಲಿ ಹಲ್ಲಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಆತಂಕಗೊಂಡಿದ್ದರು. ನಂತರ ಶಿವಶರಣಯ್ಯ ಸ್ವಾಮಿ ಮುಧೋಳ ಎಂಬ ಕಾರ್ಮಿಕ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಧ್ಯಾಹ್ನ ಕ್ಯಾಂಟೀನ್‌ನಲ್ಲಿ 150ಕ್ಕೂ ಅಧಿಕ ಜನರು ಊಟ ಸೇವನೆ ಮಾಡಿದ್ದರು. ಇವರಲ್ಲಿ ಹಲವರಿಗೆ ವಾಂತಿ- ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದರು. ಹೀಗಾಗಿ ಅವರಿಗೆ ಒಆರ್‌ಎಸ್, ಗ್ಲೂಕೋಸ್ ನೀಡಿ ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ | Lockup Death: ಲಾಕಪ್‌ ಡೆತ್‌ ಅಲ್ಲ ಎಂದಿದ್ದ ಮೃತ ಯುವಕನ ತಂದೆ ಮತ್ತೆ ಉಲ್ಟಾ!

ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

ಕಲಬುರಗಿ : ಅಯೋಧ್ಯೆಯಲ್ಲಿ ಲಾರಿ ಹಾಗೂ ಟಿಟಿ ವಾಹನದ ನಡುವೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಟಿಟಿಯಲ್ಲಿದ್ದ ಕಲಬುರಗಿ ಮೂಲದ ಮೂವರು ದುರ್ಮರಣ ಹೊಂದಿದ್ದಾರೆ. ಶಿವರಾಜ್, ಕಾಶಿನಾಥ್, ತಂಗೆಮ್ಮ ಮೃತ ದುರ್ದೈವಿಗಳು.

ಕಲಬುರಗಿಯ 22 ಮಂದಿ ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟಿದ್ದರು. ಈ ವೇಳೆ ಅಯೋಧ್ಯೆ ಸಮೀಪ ಕಳೆದ ರಾತ್ರಿ (ಮೇ 24) ಲಾರಿ ಹಾಗೂ ಟಿಟಿ ವಾಹನದ ನಡುವೆ ಡಿಕ್ಕಿಯಾಗಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ಡಿಕ್ಕಿ ರಭಸಕ್ಕೆ ಟಿಟಿಯಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗಾಯಾಳುಗಳಿಗೆ ಅಯೋಧ್ಯೆಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ.

Exit mobile version