Site icon Vistara News

ಅ.1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ; ಆರು ಸಾಧಕರು, ಒಂದು ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಹಿರಿಯ ನಾಗರಿಕರ

ಬೆಂಗಳೂರು: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ 6 ಮಂದಿ ಹಿರಿಯ ನಾಗರಿಕರು ಹಾಗೂ ಒಂದು ಸಂಸ್ಥೆಯನ್ನು ರಾಜ್ಯ ಸರ್ಕಾರದಿಂದ ನೀಡುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 1ರಂದು ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ ತಿಳಿಸಿದ್ದಾರೆ.

ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಸೇವೆ, ಕ್ರೀಡೆ ಮತ್ತು ಕಾನೂನು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಸಾಧಕರಿಗೆ ಮತ್ತು ಒಂದು ಸಂಸ್ಥೆಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು ಸ್ಮರಣಿಕೆ ಮತ್ತು ಒಂದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎ.ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಶಸ್ತಿ ವಿಜೇತರರು
ಎಂ.ಎಂ.ಬೋಪಯ್ಯ (74), ವಿರಾಜಪೇಟೆ (ಶಿಕ್ಷಣ ಕ್ಷೇತ್ರ)
ಡಾ.ಬಿ.ಕೆ.ಬಸವರಾಜ ರಾಜಋಷಿ (81), ಹುಬ್ಬಳ್ಳಿ (ಸಾಹಿತ್ಯ ಕ್ಷೇತ್ರ)
ವೆಂಕಪ್ಪ ಅಂಬಾಜಿ ಸುಗತೇಕರ(79), ಬಾಗಲಕೋಟೆ(ಕಲಾ ಕ್ಷೇತ್ರ)
ಡಾ.ಕೆ.ಜಿ.ಕುಲಕರ್ಣಿ(67), ಕೊಪ್ಪಳ (ಸಮಾಜಸೇವೆ ಕ್ಷೇತ್ರ)
ವಿಜಯ ರಮೇಶ್(77), ಮೈಸೂರು (ಕ್ರೀಡಾ ಕ್ಷೇತ್ರ)
ಡಾ.ಕೋಡೂರು ವೆಂಕಟೇಶ್(61), ಬೆಂಗಳೂರು (ಕಾನೂನು ಕ್ಷೇತ್ರ)
ಸಾವಿತ್ರಮ್ಮ ರಾಮಶರ್ಮ ಸೇವಾ ಟ್ರಸ್ಟ್ (1995ರಲ್ಲಿ ಸ್ಥಾಪನೆ), ಬಸವಾನಿ, ತೀರ್ಥಹಳ್ಳಿ ತಾಲೂಕು

ಇದನ್ನೂ ಓದಿ | KPSC Recruitment 2022 | ಕಾರ್ಮಿಕ ಇಲಾಖೆಯಲ್ಲಿನ 26 ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version