ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ (Writers Association) ಅಧ್ಯಕ್ಷರಾಗಿ ಹಿರಿಯ ಕವಯಿತ್ರಿ ಹಾಗೂ ಲೇಖಕಿ ಡಾ. ಎಚ್. ಎಲ್. ಪುಷ್ಪ ಅವರು ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಅವರು ಅಧ್ಯಕ್ಷರಾಗಿರುತ್ತಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಪುಷ್ಪಾ ನಡುವೆ ನೇರ ಸ್ಪರ್ಧೆ ಕಂಡು ಬಂತು. 62 ಮತಗಳ ಅಂತರದಿಂದ ಪುಷ್ಪಾ ಗೆಲುವು ಸಾಧಿಸಿದರು.
ಸಂಘದ 1,330 ಸದಸ್ಯರಲ್ಲಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಬೆಂಗಳೂರಿನಲ್ಲಿ ಮತದಾನದ ಅರ್ಹತೆ ಹೊಂದಿದ್ದ 650 ಮಂದಿಯಲ್ಲಿ 280 ಮಂದಿ ಮಾತ್ರ ಮತ ಚಲಾಯಿಸಿದರು. ರಾಜ್ಯದ ಇತರೆ ಭಾಗಗಳಿಂದ 419 ಮಂದಿ ಅಂಚೆ ಮೂಲಕ ಮತ ಚಲಾಯಿಸಿದರು. ಒಟ್ಟು ಮತಗಳಲ್ಲಿ 44 ಮತಗಳು ತಿರಸ್ಕತಗೊಂಡವು.
ಲೇಖಕಿಯರ ಕೃತಿಗೆ ಮನ್ನಣೆ
“ಎಲ್ಲ ಲೇಖಕಿಯರನ್ನು ಸಂಘದ ಚೌಕಟ್ಟಿನೊಳಗೆ ತರಲು ಪ್ರಯತ್ನಿಸುತ್ತೇನೆ. ಲೇಖಕಿಯರ ಕೃತಿಗಳಿಗೆ ಮನ್ನಣೆ ದೊರಕಿಸಿಕೊಡುವುದು ನನ್ನ ಪ್ರಮುಖ ಆದ್ಯತೆʼʼ ಎಂದು ಪುಷ್ಪಾ ಅವರು ಗೆಲುವಿನ ಬಳಿಕ ಹೇಳಿದರು.
ಇದನ್ನೂ ಓದಿ | ಮನಿ ಕಹಾನಿ ಅಂಕಣ | ಅವರಿಗೆ ಹಣದ ಬದಲು ಒಂದಷ್ಟು ಸಮಯ ಕೊಡಿ