Site icon Vistara News

Chandrayaan 3 : ಚಂದ್ರಯಾನ ಯಶಸ್ಸು ಕೋರಿ ಮುಸ್ಲಿಮರಿಂದ ದರ್ಗಾದಲ್ಲಿ ಪ್ರಾರ್ಥನೆ, ಭಾರತ್‌ ಮಾತಾ ಕಿ ಜೈ ಘೋಷಣೆ

Prayer at Yadagiri dargah

ಯಾದಗಿರಿ: ಇಡೀ ದೇಶವೇ ಚಂದ್ರಯಾನ -3 (Chandrayaana 3) ಯಶಸ್ವಿಯಾಗಲಿ ಎಂದು ಪ್ರಾರ್ಥನೆ ನಡೆಸುತ್ತಿದೆ. ಎಲ್ಲ ಕಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು (Special pooja at temples) ಆಯೋಜಿಸಲಾಗಿದೆ. ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ, ಹೆಮ್ಮೆ ತರಲಿರುವ ಚಂದ್ರಯಾನದ ಅತ್ಯಂತ ಪ್ರಮುಖ ಘಟ್ಟವಾದ ಸಾಫ್ಟ್‌ ಲ್ಯಾಂಡಿಂಗ್‌ಗೆ ಯಾವುದೇ ವಿಘ್ನ ಬಾರದಿರಲಿ ಎಂದು ಹಾರೈಸಿ ಪ್ರಾರ್ಥನೆಗಳು ನಡೆಯುತ್ತಿವೆ. ದೇವಸ್ಥಾನಗಳಲ್ಲಿ ಮಾತ್ರವಲ್ಲ, ಮಸೀದಿ, ದರ್ಗಾಗಳಲ್ಲೂ (Prayer at mosque and Dargah) ಈ ಸಂಭ್ರಮ ನೆಲೆ ಮಾಡಿದೆ.

ಯಾದಗಿರಿ ನಗರದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಮಾಡಿದರು. ಯಾದಗಿರಿಯ ದುಕಾನ್ ವಾಡಿಯ ಸೈಯದ್ ಯಾಕುಬ್ ಬುಕಾರಿ ದರ್ಗಾದಲ್ಲಿ (Yadagiri Dargah) ಚಂದ್ರಯಾನ -3 ಲ್ಯಾಂಡರ್ ಚಂದ್ರಲೋಕದಲ್ಲಿ ಸುರಕ್ಷಿತವಾಗಿ ಸ್ಪರ್ಶವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು.

ದರ್ಗಾದಲ್ಲಿ ಚಾದರ ಮತ್ತು ಪುಷ್ಪ ಅರ್ಪಿಸಿ ವಿಶೇಷ ಪ್ರಾರ್ಥನೆ ಮಾಡಿದ ಮುಸ್ಲಿಮರು ಬಳಿಕ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಸಂಭ್ರಮಿಸಿದರು. ಭಾರತ ಮಾತಾ ಕೀ ಜೈ ಎಂದು ಜೈಕಾರ ಹಾಕಿದರು. ಚಂದ್ರಯಾನ ಯಶಸ್ವಿಯಾಗಿ ಜಗತ್ತಿನಲ್ಲಿ ಭಾರತ ದೇಶದ ಹೆಸರು ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ : Chandrayaan 3: ಚಂದ್ರಯಾನ 3 ಲ್ಯಾಂಡಿಂಗ್‌ ನೋಡಬೇಕೆ? ಇಷ್ಟು ಹೊತ್ತಿಗೆ ಇಲ್ಲಿ ಬನ್ನಿ!

ಕನ್ನಡ ತಿಂಡಿ ಕೇಂದ್ರದಿಂದ ವಿಶೇಷ ಪೂಜೆ

ಬೆಂಗಳೂರಿನ ಚಾಮರಾಪೇಟೆಯಲ್ಲಿರುವ ಕನ್ನಡ ತಿಂಡಿ ಕೇಂದ್ರದಲ್ಲಿ ರಥವೊಂದನ್ನು ಸಿದ್ಧ ಮಾಡಲಾಗಿದೆ. ರಥದೊಳಗೆ ತಾಯಿ ಭುವನೇಶ್ವರಿ ಫೋಟೊ ಹಾಗೂ ರಾಷ್ಟ್ರ ಧ್ವಜವನ್ನು ಇಟ್ಟು ಅಶ್ವಥ್ ನಾರಾಯಣ, ರಾಮಚಂದ್ರ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಂದ್ರಯಾನ 3 ರಾಕೆಟ್ ಭಾವಚಿತ್ರ ಹಿಡಿದು ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಬಳಿಕ ನಗರದ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರದ ಜತೆಗೆ ರಾಷ್ಟ್ರ ಧ್ವಜ ಹಿಡಿದು ಜೈಕಾರ ಕೂಗುತ್ತಾ ತಾಯಿ ಭಾರತ ಮಾತೆಯ ಫೋಟೋ ಅರ್ಚನೆ ಮಾಡಿಸಿದರು.

Exit mobile version