ಯಾದಗಿರಿ: ವಿದ್ಯುತ್ ತಂತಿ ತಗುಲಿ (Electric Shock) ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಯಾದಗಿರಿಯ ಹೊರಟೂರು ಗ್ರಾಮದ ರೈತ ಮರೇಪ್ಪ (43) ಮೃತ ದುರ್ದೈವಿ.
ಮರೇಪ್ಪ, ಜಾನುವಾರುಗಳಿಗೆ ಮೇವು ತೆಗೆದುಕೊಂಡು ಹೋಗಲು ಗೋಡಿಹಾಳ ಗ್ರಾಮದ ಜಮೀನಿಗೆ ಬಂದಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿದ್ದರಿಂದ ವಿದ್ಯುತ್ ಪ್ರಸರಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈಯಕ್ತಿಕ ಆರ್ಥಿಕ ಸಹಾಯ ಮಾಡಿದರು. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: IPL 2024: ಐಪಿಎಲ್ ಪಂದ್ಯಕ್ಕೆ ಬೆಂಗಳೂರಿನಲ್ಲಿ ಬಿಎಂಟಿಸಿ ವಿಶೇಷ ಕಾರ್ಯಾಚರಣೆ; ಮೆಟ್ರೋ ರೈಲು ಓಡಾಟ ವಿಸ್ತರಣೆ
ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!
ಮೇರಿಲ್ಯಾಂಡ್: ಕೊಲೆ ಪ್ರಕರಣದ (murder case) ಆರೋಪಿಯಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭದ್ರೇಶ್‌ಕುಮಾರ್ ಚೇತನ್‌ಭಾಯ್ ಪಟೇಲ್ ಅಲಿಯಾಸ್ ಭದ್ರೇಶ್‌ಕುಮಾರ್ ಸಿ. ಪಟೇಲ್‌ನ (Bhadreshkumar Chetanbhai Patel alias Bhadreshkumar C. Patel) ಸುಳಿವು ನೀಡಿದವರಿಗೆ 2,50,000 ಡಾಲರ್ (3 ಕೋಟಿ ರೂ.) ಬಹುಮಾನವನ್ನು ಯುನೈಟೆಡ್ ಸ್ಟೇಟ್ಸ್‌ನ (United States) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (Federal Bureau of Investigation) ಅಧಿಕಾರಿಗಳು ಘೋಷಿಸಿದ್ದಾರೆ.
ಗುಜರಾತ್‌ನ (gujarat) ಕಂತ್ರೋಡಿ ತಾಲೂಕಿನ ವಿರಾಮ್‌ಗಮ್‌ನ 34 ವರ್ಷದ ಭಾರತೀಯ ಮೂಲದ ಭದ್ರೇಶ್‌ಕುಮಾರ್ ಸಿ. ಪಟೇಲ್ 2015ರ ಏಪ್ರಿಲ್ 12ರಂದು ತನ್ನ ಹೆಂಡತಿಯನ್ನು ಕೊಂದು ಪರಾರಿಯಾಗಿದ್ದ ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿರುವ ಭದ್ರೇಶ್‌ಕುಮಾರ್ ಸಿ. ಪಟೇಲ್ ಮತ್ತು ಆತನ ಪತ್ನಿ ಪಾಲಕ್ ಪಟೇಲ್ ಡೋನಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
2015ರ ಏಪ್ರಿಲ್ 13ರಂದು ಮೇರಿಲ್ಯಾಂಡ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಹೊರಡಿಸಲಾದ ಬಂಧನ ವಾರಂಟ್ ಪ್ರಕಾರ ಪಟೇಲ್ ವಿರುದ್ಧ ಉದ್ದೇಶಪೂರ್ವಕವಾಗಿ ಹಲ್ಲೆ, ಕೊಲೆ ಮಾಡಿರುವ ಆರೋಪವಿದೆ. ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್, ಡಿಸ್ಟ್ರಿಕ್ಟ್ ಆಫ್ ಮೇರಿಲ್ಯಾಂಡ್, ಬಾಲ್ಟಿಮೋರ್, ಮೇರಿಲ್ಯಾಂಡ್ 2015 ರಂದು FBI ನ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಭದ್ರೇಶ್‌ಕುಮಾರ್ ಸಿ. ಪಟೇಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ನವವಿವಾಹಿತರಾದ ಭದ್ರೇಶಕುಮಾರ್ ಮತ್ತು ಪಾಲಕ್ ಪಟೇಲ್ ಕೊನೆಯ ಬಾರಿಗೆ ಜತೆಯಾಗಿ ಕಾಣಿಸಿಕೊಂಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ.
The #FBI offers a reward of up to $250,000 for info leading to the arrest of Ten Most Wanted Fugitive Bhadreshkumar Chetanbhai Patel, wanted for allegedly killing his wife while they were working at a donut shop in Hanover, Maryland, on April 12, 2015: https://t.co/tCZ0Fde7WQ pic.twitter.com/GGLK4dBLhA
— FBI Most Wanted (@FBIMostWanted) April 12, 2024
ಕೊಲೆ ಮಾಡಿ ಪರಾರಿಯಾಗಿದ್ದು ಹೇಗೆ?
ಮದುವೆಯಾದ ಬಳಿಕ ಭದ್ರೇಶ್‌ಕುಮಾರ್ ಸಿ. ಪಟೇಲ್ ಪತ್ನಿಯೊಂದಿಗೆ ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿ ನೆಲೆಸಿದ್ದರು. ಅಲ್ಲಿ ಅವರಿಬ್ಬರೂ ಡೋನಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಪಾಲಕ್ ಅವರು ಕುಟುಂಬ ಸದಸ್ಯರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಅವರು ಭಾರತಕ್ಕೆ ಮರಳಿ ಬರಲು ಬಯಸುವುದಾಗಿ ಹೇಳಿದ್ದಳು. ಬಳಿಕ ಪಾಲಕ್ ಮತ್ತು ಭದ್ರೇಶ್‌ಕುಮಾರ್ ಹಿಂದಿನ ಕೋಣೆಗೆ ತೆರಳಿದ್ದು, ಅಲ್ಲಿ ಅವಳನ್ನು ಆತ ಚಾಕುವಿನಿಂದ ಇರಿದು ಕೊಂದಿದ್ದ. ಬಳಿಕ ಆತ ಕೆಲವೇ ನಿಮಿಷದಲ್ಲಿ ಹೊರಗೆ ಹೋಗಿದ್ದ.
ಪತ್ನಿಯನ್ನು ಕೊಂದ ಅನಂತರ ಪಟೇಲ್ ಹತ್ತಿರದ ಅಪಾರ್ಟ್‌ಮೆಂಟ್‌ಗೆ ಹೋಗಿ ಬಟ್ಟೆ ಬದಲಿಸಿ, ಪಾಸ್‌ಪೋರ್ಟ್ ಮತ್ತು ಸ್ವಲ್ಪ ಹಣವನ್ನು ತೆಗೆದುಕೊಂಡು ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್ ಗೆ ಟ್ಯಾಕ್ಸಿಯಲ್ಲಿ ತೆರಳಿದ್ದಾನೆ. ಅಲ್ಲಿ ಆತ ಸುಮಾರು 3 ಗಂಟೆಗೆ ಹೊಟೇಲ್ ಗೆ ತೆರಳಿ ಮರುದಿನ ಅಲ್ಲಿಂದ 10 ಗಂಟೆ ಸುಮಾರಿಗೆ ಹೊಟೇಲ್ ನಿಂದ ಚೆಕ್ ಔಟ್ ಮಾಡಿದ್ದಾನೆ. ಅಲ್ಲಿಂದ ನೆವಾರ್ಕ್ ಪೆನ್ ನಿಲ್ದಾಣಕ್ಕೆ ಹೋಗಿದ್ದು, ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ