ಯಾದಗಿರಿ: ಆ ಕುಟುಂಬ (Family) ತಂದೆಯ ಆಸೆಯಂತೆ ಸಾವಿನ ನೋವಿನಲ್ಲಿಯೂ ಸಾರ್ಥಕತೆ ತೋರಿದ್ದು, ವೈದ್ಯಕೀಯ ವಿದ್ಯಾರ್ಥಿಗಳ (Medical students) ಓದಿಗಾಗಿ ಮೃತ ತಂದೆಯ ದೇಹ ದಾನ (Donated the body) ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ನಿವಾಸಿ 74 ವರ್ಷದ ವೃದ್ದ ಸಿದ್ದನಗೌಡ ಎಂಬುವವರು ವಯೋಸಹಜ ನಿಧನರಾಗಿದ್ದಾರೆ. ಮೃತರು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದರು, ಮೃತಪಟ್ಟ ಬಳಿಕ ತಮ್ಮ ದೇಹವನ್ನು ಮಣ್ಣು ಪಾಲು ಮಾಡುವ ಬದಲು ವಿದ್ಯಾರ್ಥಿಗಳ ಓದಿಗಾಗಿ ದೇಹ ದಾನ ಮಾಡಬೇಕೆಂದಿದ್ದರಂತೆ, ಹೀಗಾಗಿ ಅವರ ಆಸೆಯಂತೆ ಕುಟುಂಬಸ್ಥರು, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದೇಹ ದಾನ ಮಾಡಿ ಸಾವಿನಲ್ಲಿಯು ಸಾರ್ಥಕ ಭಾವ ಮೆರೆದಿದ್ದಾರೆ.
ಈ ಬಗ್ಗೆ ಮೃತ ಸಿದ್ದನಗೌಡ ಅವರ ಪುತ್ರ ರಾಚನಗೌಡ ಮಾತನಾಡಿ, ತಂದೆಯವರ ಆಸೆಯಂತೆ ಎಲ್ಲರ ಸಹಕಾರದಿಂದ ದೇಹ ದಾನ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Jasprit Bumrah: ಹಾರ್ದಿಕ್ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್ಪ್ರೀತ್ ಬುಮ್ರಾ
ಈ ಬಗ್ಗೆ ವೈದ್ಯಕೀಯ ವಿದ್ಯಾರ್ಥಿನಿ ಸ್ಪೂರ್ತಿ ಮಾತನಾಡಿ, ಸಾವಿನ ನಂತರ ಮೃತದೇಹವನ್ನು ಮಣ್ಣು ಪಾಲು ಮಾಡುವ ಬದಲು ವಿದ್ಯಾರ್ಥಿಗಳ ಓದಿಗೆ ದೇಹ ದಾನ ಮಾಡಿದ್ದು, ನಮ್ಮ ಓದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಯಾದಗಿರಿ ಮೆಡಿಕಲ್ ಕಾಲೇಜಿನ (ವೈಐಎಂಎಸ್) ಅಂಗಶಾಸ್ತ್ರ ವಿಭಾಗದ ಎಚ್ಒಡಿ ಡಾ. ಲಕ್ಷ್ಮೀಕಾಂತ, ದೇಹ ದಾನದ ಪ್ರಕ್ರಿಯೆಯ ಪ್ರಕಾರ ದೇಹವನ್ನು ಪಡೆದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಮೃತ ಕುಟುಂಬ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಇದು ಮೊದಲ ಬಾರಿಗೆ ದೇಹ ದಾನ ಪಡೆಯಲಾಗಿದೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ಅಂಗಾಂಗಗಳ ಬಗ್ಗೆ ಬೋಧನೆ ಮಾಡಲು ಮೃತ ದೇಹಗಳ ಅವಶ್ಯವಿದೆ, ದೇಹ ದಾನ ಮಾಡುವದರಿಂದ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Road Accident : ಅಪಘಾತದಲ್ಲಿ ನರಳಾಡುತ್ತಿದ್ದ ಸವಾರನ ಪಾಲಿಗೆ ಆಪತ್ಭಾಂದವರಾದ 108 ಸಿಬ್ಬಂದಿ
ಯಾರೇ ಮೃತಪಟ್ಟರು ಸಮಾಜದಲ್ಲಿ ಮಣ್ಣಿನಲ್ಲಿ ಹೂಳುತ್ತಾರೆ ಅಥವಾ ಅಗ್ನಿಗೆ ಸ್ಪರ್ಶ ಮಾಡುತ್ತಾರೆ. ಆದರೆ ದೇಹ ದಾನ ಮಾಡಲು ಸಮಾಜದಲ್ಲಿ ಆಸಕ್ತಿಯಿಂದ ಮುಂದೆ ಬರುವವರ ಸಂಖ್ಯೆ ವಿರಳವಾಗಿದೆ. ಮೃತ ಸಿದ್ದನಗೌಡ ಅವರ ಕುಟುಂಬಸ್ಥರು ಸಾವಿನ ನೋವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.