ಯಾದಗಿರಿ/ರಾಮನಗರ: ಕಾಡುಪ್ರಾಣಿಗಳ ಹಾವಳಿಗೆ ಜನರು ತತ್ತರಿಸಿ (Wild Animals Attack) ಹೋಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರ ಗೋನಾಲ ಗ್ರಾಮದಲ್ಲಿ ಚಿರತೆಯೊಂದು ನಾಯಿ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಚಿರತೆ ದಾಳಿಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಮೂರು ದಿನಗಳ ಹಿಂದೆ ದೇವರಗೋನಾಲ ಗ್ರಾಮದ ಪ್ರಕೃತಿ ಫಾರ್ಮ್ ಹೌಸ್‌ಗೆ ನುಗ್ಗಿದ್ದ ಚಿರತೆಯು, ನಂತರ ಅಲ್ಲಿದ್ದ ಶ್ವಾನದ ಮೇಲೆ ದಾಳಿ ಮಾಡಿ ಹೊತ್ತೊಯ್ದಿತ್ತು. ಬಳಿಕ ದೇವರಗೋನಾಲ- ಸಿದ್ದಾಪುರ ಗುಡ್ಡದಲ್ಲಿ ಅರ್ಧಬರ್ಧ ತಿಂದು ಹಾಕಿ ಬಿಸಾಡಿ ಹೋಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಲು ಮುಂದಾಗಿದ್ದಾರೆ. ಡ್ರೋನ್ ಮೂಲಕ ಬೋನ್ ಅಳವಡಿಸಿ ಚಿರತೆ ಸೆರೆಗೆ ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ. ಸುತ್ತಲಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರುವಂತೆ ಮೈಕ್ ಮೂಲಕ ಅನೌನ್ಸ್ ಮಾಡಿಸಲಾಗುತ್ತಿದೆ.
ಇದನ್ನೂ ಓದಿ: Road Tragedy : ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಕಂಡಕ್ಟರ್ ಸಾವು
ರೈತನ ಮೇಲೆ ಕಾಡಾನೆ ದಾಳಿ
ರಾಮನಗರದ ಮಾಗಡಿ ಅರಣ್ಯ ವ್ಯಾಪ್ತಿಯ ಗುಡ್ಡೆಮಾರನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ರೈತರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗೋವಿಂದಪ್ಪ (55) ಕಾಡಾನೆ ದಾಳಿಗೊಳಗಾದ ರೈತರಾಗಿದ್ದಾರೆ. ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಗಾಯಾಳು ಗೋವಿಂದಪ್ಪರನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ