ಯಾದಗಿರಿ: ಬ್ರಿಟನ್ ರಾಣಿ ಎಲಿಜಬೆತ್ ಧರಿಸಿದ್ದ ಕಿರೀಟದಲ್ಲಿರುವ ಕೊಹಿನೂರ್ (Kohinoor Diamond) ವಜ್ರ ಸಿಕ್ಕ ಜಿಲ್ಲೆ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮಕ್ಕೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಹಿನೂರ್ ಕರ್ನಾಟಕದ್ದು! ಯಾದಗಿರಿಯಲ್ಲಿ ಸಿಕ್ಕ ವಜ್ರ, ಹೆಮ್ಮೆ ಇಲ್ಲದ ಸರ್ಕಾರ! ಎಂಬ ಶೀರ್ಷಿಕೆಯಲ್ಲಿ ʼವಿಸ್ತಾರʼ ನ್ಯೂಸ್‌ನಲ್ಲಿ ಸೆ.12ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ವಿಚಾರ ಹೆಚ್ಚಾಗಿ ಸಾಮಾಜಿಕ ಚಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ಕೊಳ್ಳುರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Kohinoor Diamond | ಕೊಹಿನೂರ್ ಕರ್ನಾಟಕದ್ದು! ಯಾದಗಿರಿಯಲ್ಲಿ ಸಿಕ್ಕ ವಜ್ರ, ಹೆಮ್ಮೆ ಇಲ್ಲದ ಸರ್ಕಾರ!
ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮ ಹೊರವಲಯದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಪಾತ್ರದಲ್ಲಿರುವ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, 2012ರಲ್ಲಿ ಪಹಣಿಯಲ್ಲಿ ನಮೂದಿಸಲಾಗಿದ್ದ 342 ಹಾಗೂ 337 ಸರ್ವೇ ನಂಬರ್ ಅನ್ನು ಪರಿಶೀಲಿಸಿದರು. ಕೊಹಿನೂರು ವಜ್ರ ಸಿಕ್ಕ ಸ್ಥಳ ಎಂದು ಸದ್ಯ ಕೃಷ್ಣಾ ನದಿ ದಡದಲ್ಲೂ ನಾಮಫಲಕ ಅಳವಡಿಸಲಾಗಿದೆ. ಹೀಗಾಗಿ ಇಲ್ಲಿನ ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಕಿರೀಟದಲ್ಲಿರುವ ಕೊಹಿನೂರು ಡೈಮಂಡ್ ನಮ್ಮ ಭಾರತದ್ದು ಎಂಬುದು ಗೊತ್ತಿದೆ. ಆದರೆ, ಬಹಳಷ್ಟು ಜನರಿಗೆ ಇದು ಕರ್ನಾಟಕದ್ದು ಎಂದು ತಿಳಿದಿಲ್ಲ. ಈ ಸಂಗತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿ 10 ವರ್ಷಗಳೇ ಕಳೆದಿವೆ. ಆದರೂ, ವಜ್ರ ಸಿಕ್ಕ ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವುದಾಗಲಿ, ಕೊಹಿನೂರ್ ವಜ್ರವು ರಾಜ್ಯಕ್ಕೆ ಸೇರಿದ್ದು ಎಂಬ ಹಕ್ಕು ಸಾಧಿಸುವ ಬಗ್ಗೆ ನಮ್ಮ ಕರ್ನಾಟಕ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಯೇ ಇಲ್ಲ! ವಜ್ರವನ್ನು ಮರಳಿ ಭಾರತಕ್ಕೆ ತರಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುವುದನ್ನಾಗಲಿ ಮಾಡಿಲ್ಲ. ಇದು ಇತಿಹಾಸ ತಜ್ಞರ ಆಕ್ರೋಶಕ್ಕೂ ಗುರಿಯಾಗಿದೆ.
ಇದನ್ನೂ ಓದಿ | ವೋಟು ಹಾಕಿಲ್ಲವೆಂದು ತಳಕಲ್ ಕೆರೆಗೆ ನೀರು ಹರಿಸದ ಶಾಸಕ ಪಿಟಿಪಿ: ಇಟ್ಟಗಿ ಹೋಬಳಿ ಜನರ ಪ್ರತಿಭಟನೆ