ಯಲ್ಲಾಪುರ : (Yallapura News) ಇಡಗುಂದಿ ವಲಯದ ವಜ್ರಳ್ಳಿ ಶಾಖಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ ಕೊಂದು ಮಾರಾಟ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ಘಟನೆಯ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ತಾಲೂಕಿನ ವಜ್ರಳ್ಳಿಯ ಜಿಕ್ರಿಯಾ ಉಮರಸಾಬ್ ಮುಲ್ಲಾ ಹಾಗೂ ಬಾಳ್ನಿಮನೆ ಈರಾಪುರದ ಗಜಾನನ ಮಹಾದೇವ ಪಟಗಾರ ಇವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಮುಖ್ಯ ಆರೋಪಿ ತಳ್ಳಿಕೇರಿಯ ತಿಮ್ಮಣ್ಣಗೌಡ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ. ವನ್ಯಜೀವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕ್ರಮಕೈಗೊಳ್ಳಲಾಗಿದೆ.
ಇದನ್ನೂ ಓದಿ: Dattatreya Hosabale: ದನದ ಮಾಂಸ ತಿನ್ನುವವರಿಗೆ ಬಾಗಿಲು ಮುಚ್ಚಿಲ್ಲ, ಹಿಂದು ಧರ್ಮಕ್ಕೆ ವಾಪಸಾಗಬಹುದು ಎಂದ ಹೊಸಬಾಳೆ
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜೆ.ಹೆಗಡೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ನಡೆದ ದಾಳಿ ವೇಳೆ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ.ಎಸ್.ನಾಯ್ಕ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಚ್.ಸಿ.ಪ್ರಶಾಂತ್, ಶರಣ ಬಸವ ದೇವರ, ಸಂತೋಷ ಪವಾರ, ಗಂಗಾ, ಅಕ್ಷತಾ, ಗಸ್ತು ಅರಣ್ಯ ಪಾಲಕರಾದ ಗೌಡಪ್ಪ ಗೌಡ ಸುಳ್ಳದ, ಕೆಂಚಪ್ಪ ಹಂಚಿನಾಳ್, ದತ್ತಾತ್ರೇಯ ತಳವಾರ, ಪ್ರಶಾಂತ ಮೆಹ್ತಾ, ಕಾಶಿನಾಥ ಯಂಕಂಚಿ, ಚಂದ್ರಹಾಸ ಪಟಗಾರ, ನಾಮದೇವ ಲಮಾಣಿ, ಕ್ಷೇಮಾಭಿವೃದ್ಧಿ ನೌಕರ ಶಿವಣ್ಣಗೌಡ ಮತ್ತಿತರರು ಇದ್ದರು.
ಇದನ್ನೂ ಓದಿ: Davis Cup: ಡೇವಿಸ್ ಕಪ್: ಭಾರತ ತಂಡಕ್ಕೆ ಡೆನ್ಮಾರ್ಕ್ ಸವಾಲು