ವಿಧಾನ ಪರಿಷತ್ (ಬೆಳಗಾವಿ): ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಪಡೆಯಲು ಈ ಹಿಂದ ಜನಪ್ರಿಯವಾಗಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು (Yashaswini Scheme) ಜನವರಿ 1 ರಿಂದ ಸರ್ಕಾರ ಆರಂಭಿಸುತ್ತಿದ್ದು, ಮೂವತ್ತು ಲಕ್ಷ ಜನರ ನೋಂದಣಿ ಗುರಿ ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ.
ಈ ಕುರಿತು ಬಿಜೆಪಿ ಸದಸ್ಯ ಸಿ.ಎನ್. ಮಂಜೇಗೌಡ ಕೇಳಿದ ಪ್ರಶ್ನೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗುತ್ತಿದೆಯೇ?ಅಳವಡಿಕೆ ಮಾನದಂಡಗಳೇನು? ಇದಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆಯೇ? ನವೆಂಬರ್ 01 ರಿಂದ ಡಿಸೆಂಬರ್ 31ರೊಳಗೆ ನೋಂದಣಿ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ನೊಂದಣಿ ಆಗದೆ ಇರುವರು ಏನು ಮಾಡಬೇಕು? ನೋಂದಣಿ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಬೇಕು ಎಂದು ಎಂದು ಮಂಜೇಗೌಡ ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಸೋಮಶೇಖರ್, ಯೋಜನೆಯು 2003ರಿಂದ 2018ರವರೆಗೆ ಜಾರಿಯಲ್ಲಿದೆ. ಒಂದಲ್ಲ ಒಂದು ಸಹಕಾರ ಸಂಸ್ಥೆಯಲ್ಲಿ ಜನರು ನೊಂದಣಿ ಆಗಿರುತ್ತಾರೆ. ಅವರಿಗಾಗಿ ಈ ಯೋಜನೆ ಮಾಡಲಾಗಿದೆ. ಅವಧಿ ವಿಸ್ತರಣೆ ಮಾಡಲು ಆಗುವುದಿಲ್ಲ. 30 ಲಕ್ಷ ನೋಂದಣಿ ಗುರಿ ಇದೆ. ಈವರೆಗೂ ಈವರೆಗೂ 19.62 ಲಕ್ಷ ನೊಂದಣಿ ಆಗಿದೆ. ಇನ್ನೂ ಸಮಯ ಇದೆ, ಟಾರ್ಗೆಟ್ ರೀಚ್ ಆಗುತ್ತೇವೆ ಎಂಬ ವಿಶ್ವಾಸ ಇದೆ. ಅದಕ್ಕಾಗಿ ಒಂದು ಕಮಿಟಿ ಇದೆ. ಗುರಿ ಮುಟ್ಟದೇ ಇದ್ದರೆ ವಿಸ್ತರಣೆ ಬಗ್ಗೆ ಯೋಜನೆ ಮಾಡುತ್ತದೆ ಎಂದರು.
ಸೈನಿಕರಿಗೆ ಉಚಿತವಾಗಿ ಯೋಜನೆ ಸೌಲಭ್ಯ ಸಿಗಲಿ ಎಂದು ಮಂಜೇಗೌಡ ಒತ್ತಾಯ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಸಲಹೆ ಪರಿಗಣಿಸುತ್ತೇವೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಇದನ್ನೂ ಓದಿ | ಗ್ರಾಹಕ ಜಾಗೃತಿ | ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಷ್ಟೇ ಯಶಸ್ವಿನಿ ವಿಮೆ ಪರಿಹಾರ