ಬೆಂಗಳೂರು, ಕರ್ನಾಟಕ: ಭಾರತದ ಸಿಲಿಕಾನ್ ಸಿಟಿ (Silicon City of India) ಎಂದೇ ಖ್ಯಾತವಾಗಿರುವ ಬೆಂಗಳೂರು ನಗರವು (Bengaluru City) ತನ್ನ ಅತಿಯಾದ ಟ್ರಾಫಿಕ್‌ನಿಂದಾಗಿ (Bengaluru Traffic) ಅಷ್ಟೇ ಕುಖ್ಯಾತಿಯನ್ನೂ ಗಳಿಸಿದೆ. ನಗರದ ಟ್ರಾಫಿಕ್ ನಿಯಂತ್ರಣಕ್ಕೆ ಮೆಟ್ರೋ(Metro), ಲೋಕಲ್ ಟ್ರೈನ್ (Local Train) ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪೂರ್ಣ ಪ್ರಮಾಣದ ಲಾಭ ಇನ್ನೂ ದೊರೆತಿಲ್ಲ. ಈ ಟ್ರಾಫಿಕ್ ಸಮಸ್ಯೆಯಿಂದಾಗಿ ವರ್ಷಕ್ಕೆ ಬೆಂಗಳೂರಿಗೆ ಸುಮಾರು 19,725 ಕೋಟಿ ರೂಪಾಯಿ ನಷ್ಟವಾಗುತ್ತಿದೆ! ಹೌದು ಇದು ನಿಜ. ಟ್ರಾಫಿಕ್‌ನಿಂದ ವಿಳಂಬ, ದಟ್ಟಣೆ, ಸಿಗ್ನಲ್ ನಿಲುಗಡೆ, ಸಮಯ ವ್ಯರ್ಥ, ಇಂಧನ ವ್ಯರ್ಥ ಮತ್ತು ಟ್ರಾಫಿಕ್‌ಗೆ ಸೇರಿದಂತೆ ಇತರ ಎಲ್ಲ ಅಂಶಗಳಿಂದಾಗಿ ಬೆಂಗಳೂರಿಗೆ ಭಾರೀ ಪ್ರಮಾಣದ ನಷ್ಟವಾಗುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂ ಎನ್ ಶ್ರೀಹರಿ (traffic and mobility expert MN Sreehari) ಹಾಗೂ ಅವರ ತಂಡವು ಅಂದಾಜಿಸಿದೆ.
ಸುಗಮ ಸಾರಿಗೆಗೆ ಸಂಬಂಧಿಸಿದಂತೆ ಹಲವಾರು ಸರ್ಕಾರಗಳು ಮತ್ತು ಸ್ಮಾರ್ಟ್ ಸಿಟಿಗಳ ಸಲಹೆಗಾರರೂ ಆಗಿರುವ ಶ್ರೀಹರಿ ಅವರು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಚಾರ ನಿರ್ವಹಣೆ, ರಸ್ತೆ ಯೋಜನೆ, ಮೇಲ್ಸೇತುವೆಗಳ ಇತರ ವಿಷಯಗಳ ಬಗ್ಗೆ ಶಿಫಾರಸುಗಳೊಂದಿಗೆ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದಾರೆ.
ನಗರದಲ್ಲಿ ಸಂಪೂರ್ಣ ಕಾರ್ಯನಿರ್ವಹಣೆಯ 60 ಫ್ಲೈಓವರ್‌ಗಳಿವೆ. ಹಾಗಿದ್ದೂ, ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ಗಳಲ್ಲಿ ನಿಲುಗಡೆ, ವೇಗವಾಗಿ ಚಲಿಸುವ ವಾಹನಗಳ ಅಡಚಣೆ, ಇಂಧನ ನಷ್ಟ, ಪ್ರಯಾಣಿಕರ ಸಮಯ ವ್ಯರ್ಥದಿಂದಾಗಿ ಐಟಿ ಹಬ್ ಬೆಂಗಳೂರಿಗೆ ವರ್ಷಕ್ಕೆ 19,725 ಕೋಟಿ ರೂ. ನಷ್ಟವಾಗಿದೆ ಎಂದು ಶ್ರೀಹರಿ ಅವರು ತಂಡ ಹೇಳಿದೆ. ವಾಹನಗಳ ಸಮಯ ನಷ್ಟವನ್ನು ಆಯಾ ನೌಕರಿದಾರರ ವೇತನದ ಆಧಾರದ ಮೇಲೆ ಹಣವಾಗಿ ಪರಿವರ್ತಿಸಿ ಈ ಅಂದಾಜನ್ನು ಕಂಡುಕೊಳ್ಳಲಾಗಿದೆ.
ವರದಿಯ ಪ್ರಕಾರ, ಐಟಿ ವಲಯದಲ್ಲಿ ಹೆಚ್ಚಿದ ಉದ್ಯೋಗದ ಬೆಳವಣಿಗೆಯು ವಸತಿ, ಶಿಕ್ಷಣದಂತಹ ಎಲ್ಲಾ ಸಂಬಂಧಿತ ಸೌಲಭ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಇದು 1.45 ಕೋಟಿ ಜನಸಂಖ್ಯೆಯ ಅಗಾಧ ಬೆಳವಣಿಗೆ ಹಾಗೂ 1.5 ಕೋಟಿ ವಾಹನಗಳ ರಸ್ತೆಗಳ ಮೇಲೆ ಇಳಿಯಲು ಕಾರಣವಾಗಿದೆ.
ಜನಸಂಖ್ಯೆಯ ತೀವ್ರ ಬೆಳವಣಿಗೆ ಮತ್ತು ಅವರ ಉದ್ಯೋಗ ಸಾಮರ್ಥ್ಯದ ವೇಗವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಜನಸಂಖ್ಯೆ, ಉದ್ಯೋಗ ಸಾಮರ್ಥ್ಯ ಹಾಗೂ ಮೂಲಸೌಕರ್ಯದ ನಡುವಿನ ಕೊರತೆಯು ವಿಳಂಬ, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಮತ್ತು ಪರೋಕ್ಷ ವೆಚ್ಚದ ದೃಷ್ಟಿಯಿಂದ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಶ್ರೀಹರಿ ಮತ್ತು ಅವರ ತಂಡವು ಹೇಳಿದೆ.
ದಟ್ಟಣೆಯನ್ನು ನಿವಾರಿಸಲು, ರಸ್ತೆಗಳು ಸಂಚಾರಕ್ಕೆ ಮತ್ತು ಫುಟ್‌ಪಾತ್‌ಗಳು ಕಾನೂನುಬದ್ಧವಾಗಿ ಪಾದಚಾರಿಗಳ ನಡಿಗೆಗೆ ಮೀಸಲಾಗಿರುವುದರಿಂದ ರಸ್ತೆ ಬದಿಯ ಪಾರ್ಕಿಂಗ್ ಅನ್ನು ತೆಗೆದುಹಾಕಲು ತಂಡವು ಸೂಚಿಸಿತು. ಸಾರಿಗೆ ತಜ್ಞರಾದ ನಾನು ಬೆಂಗಳೂರಿನಲ್ಲಿ ವಾಹನ ನಿಲುಗಡೆ ಇಲ್ಲದ ಒಂದು ರಸ್ತೆಯನ್ನು ತೋರಿಸಲು ವಿಫಲನಾಗಿದ್ದೇನೆ ಎಂದು ಶ್ರೀಹರಿ ಹೇಳಿದರು.
ಈ ಸುದ್ದಿಯನ್ನೂ ಓದಿ: Bengaluru Traffic | ಸಂಚಾರ ಕಿರಿಕಿರಿಗೆ ಶಾಲೆಗಳೇ ಕಾರಣ; ಇದು ಟ್ರಾಫಿಕ್ ಪೊಲೀಸ್ ರಿಪೋರ್ಟ್!
ಬೆಂಗಳೂರಿನಲ್ಲಿ ವಾಹನಗಳ ಸಂಚಾರ ವ್ಯವಸ್ಥೆಗೆ ಶಿಸ್ತು ರೂಪಿಸಲು ರಸ್ತೆಗಳು ಸಂಚಾರಕ್ಕೆ ಮತ್ತು ರೋಡ್ ಸೈಡ್ ಪಾರ್ಕಿಂಗ್ ಅನ್ನು ಫುಟ್‌ಪಾತ್ ಅನ್ನು ಕಡ್ಡಾಯವಾಗಿ ಪಾದಚಾರಿಗಳಿಗೆ ಮೀಸಲು ಇಡಬೇಕು. ಆದರೆ, ಬೆಂಗಳೂರಲ್ಲಿ ಯಾವುದೇ ಒಂದು ರೋಡ್ ಪಾರ್ಕಿಂಗ್ ಇಲ್ಲದೇ ಇರೋದನ್ನು ನೋಡೋಕೆ ಸಾಧ್ಯವಿಲ್ಲ. ಹೀಗಿದ್ದಾಗ್ಯೂ ಸಂಚಾರ ದಟ್ಟಣೆ ನಿಯಂತ್ರಣ ಅಸಾಧ್ಯ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.