ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಭಾನುವಾರ (ಡಿ.೨೫) ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ (Yellapur News) ಮುಳುಗಿ ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (೫೦) ಮೃತರು. ಮೃತದೇಹವು ಸೋಮವಾರ (ಡಿ.೨೬) ಪತ್ತೆಯಾಗಿದೆ. ಇವರು ಪತ್ನಿ, ಇಬ್ಬರು ಮಕ್ಕಳು, ತಂಗಿ ಮತ್ತು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸ ಬಂದಿದ್ದರು. ಆಂಧ್ರ ಪ್ರದೇಶದ ಮೂಲದವರಾದ ಇವರು ಹುಬ್ಬಳ್ಳಿಯಲ್ಲಿ ರೈಲ್ವೆ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ.
ಮಗನೊಂದಿಗೆ ನೀರಿಗಿಳಿದಿದ್ದ ಇವರು ನೀರಿನಲ್ಲಿ ಆಕಸ್ಮಿಕ ವಾಗಿ ಮುಳುಗಿದರು. ರಕ್ಷಿಸಲು ಸ್ಥಳೀಯರು, ಉಳಿದ ಪ್ರವಾಸಿಗರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಗ ಅಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ | Bigg Boss Kannada | ಫಿನಾಲೆ ದಿನಾಂಕ ಬದಲಾವಣೆ: ಮಿಡ್ ವೀಕ್‌ನಲ್ಲಿ ಎಲಿಮಿನೇಟ್ ಆಗೋದು ಯಾರು?
ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ನಾರಾಯಣ ಭಟ್ಟ ಕಂಚನಳ್ಳಿ, ಸಮಿತಿಯ ಸದಸ್ಯರಾದ ಶ್ರೀಪತಿ ಮೆಣಸುಮನೆ, ಶಶಿಧರ ಕೋಟೆಮನೆ, ರಾಘವೇಂದ್ರ ಮೆಣಸುಮನೆ, ಯಶವಂತ ಪಟಗಾರ, ಡಿ.ಆರ್.ಎಫ್.ಒ ಶಿವಾನಂದ, ಕಾವಲುಗಾರ ಸಂಗಮೇಶ ಹಾಗೂ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ರಾತ್ರಿ 11 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ.
ಶೋಧ ಕಾರ್ಯವನ್ನು ಸೋಮವಾರ (ಡಿ.೨೬) ಬೆಳಗ್ಗೆ ತೀವ್ರಗೊಳಿಸಿದಾಗ, 10.30 ಗಂಟೆಯ ಸುಮಾರಿಗೆ ಮೃತದೇಹ ದೊರೆಯಿತು. ವಿಷಯ ತಿಳಿದ ಸಂಬಂಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿದ್ದರು. ಯಲ್ಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Kangana Ranaut | 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಕಂಗನಾಗೆ ಪದ್ಮಶ್ರಿ ಪ್ರಶಸ್ತಿ, ನಮಗೇಕಿಲ್ಲ: ನಟಿ ಜಯಸುಧಾ