ಬೆಂಗಳೂರು: ಬೆಂಗಳೂರ ನಗರ ಜಿಲ್ಲೆಯ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯ ಎಸ್ಟಿ ಸೋಮಶೇಖರ್(S T Somashekhar) ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಜವರಾಯಿ ಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಕಾರ್ಯ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಅಂತಿಮವಾಗಿ ಮಾಜಿ ಸಚಿವರಾಗಿರುವ ಎಸ್. ಟಿ ಸೋಮಶೇಖರ್ ಅವರು ಗೆಲುವಿನ ನಗು ಬೀರಿದರು.
2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರು ಎಸ್ಟಿ ಸೋಮಶೇಖರ್ ಅವರು ಇದೇ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು.
2018ರಲ್ಲಿಯೂ ಕಾಂಗ್ರೆಸ್‌ನ ಇದೇ ಸೋಮಶೇಖರ್, ಜೆಡಿಎಸ್‌ನ ಜವರಾಯಿಗೌಡರ ವಿರುದ್ಧ 10,711 ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಎಸ್ ಟಿ ಸೋಮಶೇಖರ್ ಇತರ ಕೆಲವು ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಇದನ್ನೂ ಓದಿ : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಹೊಸದಾಗಿ ರಚನೆಯಾಗಿದ್ದ ಯಶವಂತಪುರ ಕ್ಷೇತ್ರಕ್ಕೆ 2008ರಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾದವರು ಶೋಭಾ ಕರೆಂದ್ಲಾಜೆ. ಆಗ ಕಾಂಗ್ರೆಸ್‌ನಿಂದ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಎಸ್ ಟಿ ಸೋಮಶೇಖರ್. ಸೋಮಶೇಖರ್ ಅವರಿಗಿಂತ ಕೇವಲ 1082 ಮತ ಹೆಚ್ಚು ಪಡೆದು ಶೋಭಾ ಕರೆಂದ್ಲಾಜೆ ಶಾಸಕಿಯಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್ ಟಿ ಸೋಮಶೇಖರ್, ತಮ್ಮ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ನ ಟಿ ಎನ್ ಜವರಾಯಿಗೌಡ ಅವರಿಗಿಂತ 29,100 ಹೆಚ್ಚು ಮತ ಪಡೆದು ಜಯ ಸಾಧಿಸಿದ್ದರು.