ಮೈಸೂರು: ಈ ಬಾರಿ ಮೈಸೂರಿನಲ್ಲಿ ಯೋಗ ದಿನ ಆಚರಿಸುವುದರ ಮೂಲಕ ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದದ್ದಕ್ಕೆ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ೮ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇರಿ ನೇರವಾಗಿ ಭಾಗವಹಿಸಿದ್ದ ಸುಮಾರು ೧೫ ಸಾವಿರ ಜನರು ಹಾಗೂ ವರ್ಚುವಲ್ ಆಗಿ ವಿಶ್ವದಾದ್ಯಂತ ಭಾಗಿಯಾಗಿರುವ ಕೋಟ್ಯಂತರ ಜನರನ್ನುದ್ದೇಶಿಸಿ ಮಾತನಾಡಿದರು.
ಯೋಗವು ಮನಸ್ಸು ಹಾಗೂ ದೇಹವನ್ನು ಒಂದು ಮಾಡುತ್ತದೆ. ಅದೇ ರೀತಿ ಯೋಗವು ವಿಶ್ವದ ಮನಸ್ಸುಗಳನ್ನು ಒಂದು ಮಾಡುತ್ತದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರೂಪಿಸಿದ್ದಾರೆ. ಯೋಗಕ್ಕೆ ಬಹುದೊಡ್ಡ ಚರಿತ್ರೆ ಇದೆ. ಇಂದಿನ ಯೋಗ ದಿನದ ಕಾರ್ಯಕ್ರಮವೂ ಚರಿತ್ರೆಯನ್ನು ನಿರ್ಮಿಸಲಿದೆ ಎಂದು ತಿಳಿಸಿದರು.
೮ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು ೧೫ ಸಾವಿರ ಜನರು ಭೌತಿಕವಾಗಿ ಮೈಸೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ | Horoscope Today | ಅಂತಾರಾಷ್ಟ್ರೀಯ ಯೋಗದ ದಿನವಾದ ಇಂದು ಯಾರ ಯೋಗ ಹೇಗಿದೆ?