ಬೆಂಗಳೂರು: ಮೈಸೂರಿನಲ್ಲಿ ಆಯೋಜಿಸಿದ್ದ Yoga Day 2022 ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತ ಯೋಗದ ಕುರಿತು ಅನೇಕ ವಿಚಾರ ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ʼಗಾರ್ಡಿಯನ್ ರಿಂಗ್ ಆಫ್ ಯೋಗʼ ಕುರಿತು ಪ್ರಸ್ತಾಪಿಸಿದ್ದಾರೆ. ಇಂದು ಇಡೀ ವಿಶ್ವವೇ ಗಾರ್ಡಿಯನ್ ರಿಂಗ್ ಆಫ್ ಯೋಗ ಪ್ರಯೋಗ ಮಾಡುತ್ತಿದೆ ಎಂದಿದ್ದಾರೆ.
ʼಗಾರ್ಡಿಯನ್ ರಿಂಗ್ ಆಫ್ ಯೋಗʼ ಎಂದರೆ ಇಡೀ ವಿಶ್ವವನ್ನೇ ಯೋಗದ ಮೂಲಕ ಒಂದೇ ಸೂತ್ರದಲ್ಲಿ ಜೋಡಿಸುವುದು. ಅದಕ್ಕಾಗಿ ʼಒಂದು ಸೂರ್ಯ, ಒಂದು ಭೂಮಿʼ ಎಂಬ ಧ್ಯೇಯವಾಕ್ಯವನ್ನು ಅರಿಸಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ವಿಶ್ವದ ಸುಮಾರು ೮೦ ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ.
ಇದನ್ನೂ ಓದಿ | Yoga Day 2022 | ಯೋಗ; ಜೀವನದ ಭಾಗವಲ್ಲ, ಜೀವನ ಮಾರ್ಗ: ಪ್ರಧಾನಿ ಮೋದಿ
ಸೂರ್ಯೋದಯ ಪೂರ್ವದ ರಾಷ್ಟ್ರದಿಂದ ಆರಂಭವಾಗುತ್ತದೆ. ಅದರಂತೆ, ವಿಶ್ವದಲ್ಲಿ ಮೊದಲಿಗೆ ಜಪಾನ್‌ನಲ್ಲಿ ಸೂರ್ಯೋದಯವಾಗುತ್ತದೆ. ಭಾರತೀಯ ಕಾಲಮಾನ ಬೆಳಗ್ಗೆ ೩ ಗಂಟೆಗೇ ಆಯೋಜನೆಯಾಗಿದೆ. ಅದೇ ರೀತಿ, ಮುಂದುವರಿದು ಪಶ್ಚಿಮದ ಕಡೆಗೆ ದೇಶಗಳಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ಯೋಗ ಆಚರಿಸುವ ಮೂಲಕ ಸೂರ್ಯನನ್ನು ಸ್ವಾಗತಿಸುವುದು.
ಎಲ್ಲ ದೇಶಗಳಲ್ಲೂ ಸೂರ್ಯೋದಯ ಆಗುವವರೆಗೂ ಈ ಚಕ್ರ ಮುಂದುವರಿಯುತ್ತದೆ. ಈ ಮೂಲಕ, ಇಡೀ ವಿಶ್ವವೇ ಒಂದು ಸೂರ್ಯನ ಅಡಿಯಲ್ಲಿದೆ ಎಂಬ ಭಾವನೆ ಮೂಡಿಸುತ್ತದೆ. ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಸುಧೈವ ಕುಟುಂಬಕಂ ಸಂದೇಶವನ್ನು ಇದು ಸಾರುತ್ತದೆ. ಆಸ್ಟ್ರೇಲಿಯಾದಿಂದ ನ್ಯೂಯಾರ್ಕ್‌ವರೆಗೆ, ಆಫ್ರಿಕಾದಿಂದ ಲ್ಯಾಟಿನ್ ಅಮೆರಿಕವರೆಗೆ ಪ್ರಸಿದ್ಧ ಸ್ಥಳಗಳಲ್ಲಿ ಭಾರತೀಯ ರಾಯಭಾರ ಕಚೇರಿಗಳು ಯೋಗ ಹಾಗೂ ಸೂರ್ಯ ನಮಸ್ಕಾರ ಆಯೋಜಿಸಿವೆ.
ಇದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಗಾರ್ಡಿಯನ್ ರಿಂಗ್ ಆಫ್ ಯೋಗ ಎಂದು ಕರೆದಿದ್ದಾರೆ. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಮೂಡಿದರೆ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಜೀವಿಸುತ್ತಾರೆ. ಆಗ ವಿಶ್ವದಲ್ಲಿ ಶಾಂತಿ ಮೂಡುತ್ತದೆ. ಇದೇ ಕಾರಣಕ್ಕೆ ಈ ವರ್ಷದ ಯೋಗದ ಇನಕ್ಕೆ ʼಮಾನವರೆಗಾಗಿ ಯೋಗʼ ಎಂಬ ಧ್ಯೇಯವಾಕ್ಯ ಅಳವಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ | Yoga in mysore: ಯೋಗವನ್ನು ಅರಿಯೋಣ, ಪಾಲಿಸೋಣ, ಪೋಷಿಸೋಣ, ಜೀವಿಸೋಣ ಎಂದರು ಮೋದಿ