Site icon Vistara News

Yoga Day 2023: ಸುತ್ತೂರು ಮಠದಲ್ಲಿ ಯೋಗ ದಿನಾಚರಣೆ; 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

Yoga Day 2023 at Suttur Mutt More than 2000 people participated

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದ (Yoga Day 2023) ಅಂಗವಾಗಿ ವಿಸ್ತಾರ ನ್ಯೂಸ್, ಸೈಕಲ್ ಪ್ಯೂರ್ ಅಗರಬತ್ತಿ, ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ಸಹಯೋಗದೊಂದಿಗೆ ಸುತ್ತೂರು ಶ್ರೀ ವೀರಸಿಂಹಾಸನ ಮಠದ ವತಿಯಿಂದ ಸಾಮೂಹಿಕ ಯೋಗ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಈ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿರುವ ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ ಅವರ ಗದ್ದುಗೆ ಎದುರು ಯೋಗಾಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಳಗಿನ ಜಾವ 6 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಗದ್ದುಗೆ ಬಳಿ ಸೇರಿದರು. ಯೋಗ ಮ್ಯಾಟ್, ಜಮಖಾನಗಳನ್ನು ಹಾಸಿ ಯೋಗಾಭ್ಯಾಸಕ್ಕೆ ಸಜ್ಜಾಗಿದ್ದರು.

ಸುತ್ತೂರು ಮಠದಲ್ಲಿನ ಯೋಗಾಭ್ಯಾಸದ ವಿಸ್ತಾರ ನೋಟ

ಇದನ್ನೂ ಓದಿ: ವಿಶ್ವ ದರ್ಶನ ಸಂಸ್ಥೆಯಿಂದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಆರಂಭ; ಅರ್ಜಿ ಸಲ್ಲಿಕೆ ಶುರು

ಜೆಎಸ್​ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವಿಜಯ ಶಂಕರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಎಸ್​ಎಸ್ ಶಾಲೆಯ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಪಿಲಾ ನದಿಯ ತಟದಲ್ಲಿರುವ ಗದ್ದುಗೆಯ ಸುಂದರ ಪರಿಸರದಲ್ಲಿ ಯೋಗಾಭ್ಯಾಸ ಮಾಡಿದರು. ಪ್ರಾರ್ಥನೆಯೊಂದಿಗೆ ಯೋಗಾಭ್ಯಾಸ ಪ್ರಾರಂಭವಾಯಿತು.

ಯೋಗದಲ್ಲಿ ನಿರತವಾಗಿರುವ ವಿದ್ಯಾರ್ಥಿಗಳು

ಕುತ್ತಿಗೆ, ಭುಜ, ಮಂಡಿ ವ್ಯಾಯಾಮಗಳನ್ನು ಪ್ರಾರಂಭದಲ್ಲಿ ಮಾಡಿಸಲಾಯಿತು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಸೂರ್ಯ ನಮಸ್ಕಾರ, ತಾಡಾಸನ, ವಕ್ರಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಸ್ಟ್ರಾಸನ, ಶಶಾಂಕಾಸನ, ಉತ್ತಾನ ದಂಡಾಸನ, ವಕ್ರಾಸನ, ಭುಜಂಗಾನ ಮುಂತಾದ ಆಸನಗಳನ್ನು ಅಭ್ಯಾಸ ಮಾಡಲಾಯ್ತು. ಬಳಿಕ ನಾಡಿ ಶೋಧನ, ಭ್ರಮರಿ ಪ್ರಾಣಾಯಾಮ, ಧ್ಯಾನ ಮುಗಿಸಿ ಶಾಂತಿ ಮಂತ್ರದೊಂದಿಗೆ ಅಂತಿಮಗೊಳಿಸಲಾಯ್ತು.

ಯೋಗಾಸನದ ಡ್ರೋನ್‌ ನೋಟ

ಇದನ್ನೂ ಓದಿ: Weather Report: ಇನ್ನು ನಾಲ್ಕು ದಿನ ಭಯಂಕರ ಮಳೆ; 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

ಜೆಎಸ್​ಎಸ್ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಯೋಗಪಟುಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾರ್ಗದರ್ಶನ ಮಾಡಿದರು. ಜೆಎಸ್​ಎಸ್ ಅಕಾಡೆಮಿ ಆಫ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ ಕುಲಸಚಿವ ಡಾ.ಬಿ.ಮಂಜುನಾಥ್, ಶೈಕ್ಷಣಿಕ ಡೀನ್ ವಿಶಾಲ್ ಕುಮಾರ್ ಗುಪ್ತಾ, ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ.ಮಹೇಂದ್ರ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Exit mobile version