ಮಂಗಳೂರು: ನಗರದ ಮಣಪ್ಪುರಂ ಫೈನಾನ್ಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯೊಬ್ಬಳು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು (Young lady missing) ಕುಟುಂಬ ಕಂಗಾಲಾಗಿದೆ.
ಮಂಗಳೂರಿನ ಸುರತ್ಕಲ್ 3ನೇ ಬ್ಲಾಕ್ ನಿವಾಸಿ ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ನಾಪತ್ತೆಯಾದ ಯುವತಿ. ಇವಳು ಜನವರಿ ೧೬ರಂದು ಬೆಳಗ್ಗೆ ಏಳು ಗಂಟೆಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದಳು. ಸಂಜೆ ಆರು ಗಂಟೆಯಾದರೂ ಮರಳಿ ಬಾರದೆ ಇದ್ದಾಗ ಮನೆ ಮಂದಿ ಆಕೆಯನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ಆಗಲೇ ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಆಕೆ ಎಲ್ಲಿ ಹೋಗಿದ್ದಾಳೆ, ಅವಳಾಗಿಯೇ ಹೋಗಿದ್ದಾಳೆಯೇ, ಅಪಹರಣ ನಡೆದಿದೆಯೇ ಎನ್ನುವ ವಿಚಾರದಲ್ಲಿ ಕುಟುಂಬ ಆತಂಕದಲ್ಲಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಂಸ್ಥೆಯ ಇತರ ಸಿಬ್ಬಂದಿಗಳಿಂದಲೂ ಯುವತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಐದು ಅಡಿ ಆರು ಇಂಚು ಎತ್ತರ ಇರುವ, ಬಿಳಿ ಮೈ ಬಣ್ಣದ, ದಪ್ಪ ಮುಖದ, ಸಾಧಾರಣ ಮೈಕಟ್ಟಿನ ಯುವತಿ ಈಕೆ. ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೊರಟಾಗ ಹಸಿರು ಬಣ್ಣದ ಟಾಪ್ ಮತ್ತು ಗೋಲ್ಡನ್ ಕಲರ್ ಪ್ಯಾಂಟ್ ಧರಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Woman murdered | ಮನೆಗೆ ನುಗ್ಗಿ ಯುವತಿ ಕೊಲೆ: ಗುಣ ನಡತೆ ಇಷ್ಟವಾಗದೆ ದೂರ ಮಾಡಿದ ಭಗ್ನಪ್ರೇಮಿಯೇ ಹಂತಕ?