ಚಿತ್ರದುರ್ಗ: ಜನರು ಮಾನವೀಯತೆ ಮರೆತು (No humanity) ಹೋದರೇ? ಎಂಬ ಸಂಶಯ ಮೂಡತೊಡಗಿದೆ. ಜನರ ನಿರ್ಲಕ್ಷ್ಯಕ್ಕೆ ಯುವಕನ ಪ್ರಾಣವೇ ಹೋಗಿದೆ. ಬಹುಶಃ ಯಾರಾದರೂ ಒಬ್ಬರು ಮುಂದಾಳತ್ವ ವಹಿಸಿ ರಕ್ಷಣೆಗೆ ದಾವಿಸಿದ್ದರೂ ಯುವಕ ಬದುಕುಳಿಯಬಹುದಿತ್ತು. ಆದರೆ, ಇಲ್ಲಿ ಅದಾಗಿಲ್ಲ. ಹೀಗಾಗಿ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಕ್ರಾಸ್ ಬಳಿ ರಸ್ತೆ ಅಪಘಾತ (Road Accident) ನಡೆದಿದ್ದು, ಗಾಯಗೊಂಡು ಗಂಟೆಗಟ್ಟಲೆ ನರಳುತ್ತಿದ್ದರೂ ಸಹಾಯಕ್ಕೆ ಯಾರೂ ಹೋಗದ ಅಮಾನವೀಯ ಘಟನೆ ನಡೆದಿದೆ.
ಬಾಲೇನಹಳ್ಳಿ ಕ್ರಾಸ್ ಬಳಿ ಎರಡು ಬೈಕ್‌ಗಳು ಮುಖಾಮುಖಿ (Bike Accident) ಡಿಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಬೈಕ್‌ಗಳಲ್ಲಿ ಇದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಒಂದು ಗಂಟೆ ಕಾಲ ರಸ್ತೆಯಲ್ಲೇ ಗಾಯಾಳುಗಳು ನರಳಾಡುತ್ತಿದ್ದರೂ (Groaning of the injured) ಸಹಾಯಕ್ಕೆ ಬಾರಲೇ ಇಲ್ಲ. ಈ ನಡುವೆ ತೀವ್ರ ರಕ್ತಸ್ರಾವದಿಂದ ಮಾರುತಿ ( 22) ಎಂಬ ಯುವಕ ಮೃತಪಟ್ಟಿದ್ದಾರೆ. ಚಿಕ್ಕಮದುರೆ ಗ್ರಾಮದ ನಿವಾಸಿಯಾಗಿರುವ ಮಾರುತಿ ರಸ್ತೆಯಲ್ಲೇ ಪ್ರಾಣ ಬಿಡುವಂತಾಯಿತು.
ಇದನ್ನೂ ಓದಿ: Weather Report : ಇಂದು 9 ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಬೆಂಗಳೂರಲ್ಲಿ ಕಣ್ಣಾಮುಚ್ಚಾಲೆ
ಕೈಕಟ್ಟಿ ನಿಂತಿದ್ದ ಜನ!
ಗಾಯಾಳುಗಳು ನರಳಾಡುತ್ತಿದ್ದರೂ ಕೈ ಕಟ್ಟಿಕೊಂಡು ಜನರು ನೋಡುತ್ತಿದ್ದರು. ಕೆಲವರು ಇದರ ವಿಡಿಯೊ, ಫೋಟೊ ತೆಗೆದುಕೊಳ್ಳುತ್ತಿದ್ದರು. ಆದರೆ, ಯಾವೊಬ್ಬರೂ ಗಾಯಾಳುಗಳ ಸಹಾಯಕ್ಕೆ ಬರಲೇ ಇಲ್ಲ.
ಐಎಎಸ್ ಕೋಚಿಂಗ್ ಪಡೆಯುತ್ತಿದ್ದ ಯುವಕ ಸಾವು!
ಈಗ ಮೃತಪಟ್ಟಿರುವ ಮಾರುತಿ ಐಎಎಸ್ ಕೋಚಿಂಗ್ (IAS Coaching) ಪಡೆಯುತ್ತಿದ್ದರು. ಭವಿಷ್ಯದಲ್ಲಿ ಒಳ್ಳೆಯ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸನ್ನು ಹೊತ್ತಿದ್ದರು. ಆದರೆ, ಈ ಅಪಘಾತದಲ್ಲಿ ಬದುಕುಳಿಯುವ ಸಾಧ್ಯತೆ ಇದ್ದರೂ ಜನರ ನಿರ್ಲಕ್ಷ್ಯದಿಂದ ಮೃತಪಡುವಂತಾಗಿದೆ.
ಇದನ್ನೂ ಓದಿ: School Building : ಶಾಲೆ ಛಾವಣಿ ಕುಸಿತ; ನಾಲ್ವರು ಮಕ್ಕಳಿಗೆ ಗಾಯ
ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ (Bangalore Private Hospital) ದಾಖಲು ಮಾಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.