ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಉಷ್ಣ ವಿದ್ಯುತ್ ಉತ್ಪಾದನಾ ಘಟಕ (ಆರ್‌ಟಿಪಿಎಸ್)ದಲ್ಲಿ ಉದ್ಯೋಗಿಯಾಗಿರುವ ಯುವಕನೊಬ್ಬ ಚಿಮಿಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಸಾಲದ್ದಕ್ಕೆ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಲೈವ್ ಶೋ ನೀಡುತ್ತಿದ್ದಾನೆ!
ಶಕ್ತಿ ನಗರದ ಯುವಕನಾಗಿರುವ ಸುನಿಲ್ ಈ ರೀತಿ ಡ್ರಾಮಾ ಸೃಷ್ಟಿ ಮಾಡಿದವನು. ಈಗ ಭವಾನಿ ಎಂಬ ಕಂಪನಿಯ ಮೂಲಕ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಮಾಡುವ ಯುವಕನಾಗಿದ್ದಾನೆ. ಕಂಪನಿಯ ನಿಲುವಿನಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಒಂಬತ್ತು ನಿಮಿಷಗಳ ಇನ್‌ಸ್ಟಾ ಲೈವ್‌ನಲ್ಲಿ ಆತ ತಿಳಿಸಿದ್ದಾನೆ.
ಸರಿಯಾಗಿ ವೇತನ ಕೊಡುತ್ತಿಲ್ಲ, ಕೆಲಸ ಮಾಡುವಾಗಲೂ ಕಿರುಕುಳ ನೀಡುತ್ತಿದ್ದಾರೆ. ನಿರಂತರವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಆತ ಹೇಳಿಕೊಂಡಿದ್ದಾರೆ.
ಯುವಕ ಸುನೀಲ್ ಶಕ್ತಿ ನಗರದ ನಿವಾಸಿಯೇ ಆಗಿದ್ದಾನೆ. ಆರ್‌ಟಿಪಿಎಸ್ 8ನೇ ಘಟಕದ ಚಿಮಿಣಿ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಶಕ್ತಿನಗರದ RTPS ಘಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿದ್ದಾರೆ.
ಇನ್‌ಸ್ಟಾದಲ್ಲಿ ಆಕ್ಟಿವ್
ಸುನಿಲ್ ತುಂಬಾ ಕ್ರಿಯಾಶೀಲ ಯುವಕನಾಗಿದ್ದು, ಕಾರ್ಮಿಕರ ಪರವಾಗಿ ಮಾತನಾಡಿದ್ದಾನೆ. ʻʻಧರ್ಮೋ ರಕ್ಷತಿ ರಕ್ಷಿತಃ ಕಾರ್ಮಿಕರ ಕೂಗು ಕಾರ್ಮಿಕರ ಸೌಕರ್ಯಗಳು ಸೌಲಭ್ಯಗಳು ಬಹಿರಂಗವಾಗಿ ಪ್ರಕಟಿಸಬೇಕು. ಕೃಷ್ಣಂ ವಂದೇ ಜಗದ್ಗುರು# kannada # karmikaruʼʼ ಎಂದು ಇನ್‌ಸ್ಟಾದಲ್ಲಿ ಹೇಳಿಕೊಂಡಿದ್ದಾನೆ. ಹಲವಾರು ರೀತಿಯ ಸಾಮಾಜಿಕ ವಿಚಾರದಲ್ಲಿ ಅತ ಹಿಂದಿನಿಂದಲೂ ಮಾತನಾಡುತ್ತಿದ್ದ.
ಇದನ್ನೂ ಓದಿ | ದಾವಣಗೆರೆಯಲ್ಲಿ ತಾಲೂಕು ದಂಡಾಧಿಕಾರಿ ಎದುರೇ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಯತ್ನ