Site icon Vistara News

Online gambling : ಆನ್‌ಲೈನ್‌ ಜೂಜಿನ ಚಟಕ್ಕೆ ಬಿದ್ದು ಮೈ ತುಂಬ ಸಾಲ; ಮದುವೆಯಾದ ಒಂದೇ ವರ್ಷದಲ್ಲಿ ಯುವಕ ಆತ್ಮಹತ್ಯೆ

suicide death online

#image_title

ತುಮಕೂರು: ಆನ್‌ಲೈನ್‌ ಜೂಜಿನ ಚಟಕ್ಕೆ ಬಿದ್ದ ಯುವಕನೊಬ್ಬ (Online gambling) ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಆತನಿಗೆ ಮದುವೆಯಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಆಗಲೇ ಕುಟುಂಬವನ್ನು ಅತಂತ್ರಗೊಳಿಸಿದ್ದಾನೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾದಪಟ್ಟಣದ ನಿವಾಸಿಯಾಗಿರುವ ಮಂಜುನಾಥ್ (34) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಆನ್‌ಲೈನ್‌ನಲ್ಲಿರುವ ರಮ್ಮಿ ಸರ್ಕಲ್‌ ಜೂಜಿನ ಚಟಕ್ಕೆ ಬಿದ್ದಿದ್ದ. ಈ ಆಟಕ್ಕಾಗಿ ಆತ ತನ್ನ ಗೆಳೆಯರೊಂದಿಗೆ ಬಡ್ಡಿಗೆ ಸಾಲ ಪಡೆದಿದ್ದ. ಇದನ್ನು ತೀರಿಸಲಾಗದೆ ಮತ್ತು ದಿನವೂ ಹೆಚ್ಚುತ್ತಿರುವ ಸಾಲವನ್ನು ನೋಡಿ ಆತ ಕಂಗಾಲಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸೀಮೆ‌ ಹಸುಗಳನ್ನು ಸಾಕಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದ ಮಂಜುನಾಥ್‌ಗೆ ಯಾವಾಗ ಆನ್‌ಲೈನ್‌ ಜೂಜಿನ ಚಟ ಹತ್ತಿತೋ ಅಲ್ಲಿಂದ ಸಾಲವೇ ಹೆಚ್ಚಾಯಿತು, ನೆಮ್ಮದಿ ನಾಶವಾಯಿತು. ಒಂದು ವರ್ಷದ ಹಿಂದೆ ಈತನಿಗೆ ಮದುವೆಯಾಗಿದ್ದು, ಆತನ ಚಟದಿಂದ ಮನೆ ಕೂಡಾ ಕೂಡಾ ನೆಮ್ಮದಿ ಕಳೆದುಕೊಂಡಿತ್ತು. ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ರೈಲಿನಿಂದ ಬಿದ್ದು ರಿಪ್ಪನ್‌ಪೇಟೆಯ ಡಾಕ್ಟರ್‌ ಮೃತ್ಯು

ರಿಪ್ಪನ್‌ಪೇಟೆ: ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಚಲಿಸುತಿದ್ದ ರೈಲಿನಿಂದ ಬಿದ್ದು ಪಟ್ಟಣದ ಶಬರೀಶನಗರದ ವೈದ್ಯರೊಬ್ಬರು ಮೃತಪಟ್ಟಿರುವ (Death News) ಘಟನೆ ನಡೆದಿದೆ. ಶಬರೀಶನಗರದ ಡಾ. ಗುರುರಾಜ್ ((46) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಶುಕ್ರವಾರ ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ರೈಲಿನಲ್ಲಿ ಸಂಚರಿಸುತಿದ್ದಾಗ ಕ್ಯಾತಸಂದ್ರದ ಬಳಿ ರೈಲಿನ ಬಾಗಿಲು ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಡಾ. ಗುರುರಾಜ್ ರಿಪ್ಪನ್‌ಪೇಟೆ, ಹೊಸನಗರ ಮತ್ತು ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಂಪೆಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಉನ್ನತ ಶಿಕ್ಷಣವನ್ನೂ ಮುಗಿಸಿದ್ದರು.

ರಿಪ್ಪನ್‌ಪೇಟೆ ಪಟ್ಟಣದ ಶಬರೀಶ ನಗರದ ನಿವೃತ್ತ ಶಿಕ್ಷಕ ದಿ. ಗಂಗಾಧರಪ್ಪ ಅವರ ಪುತ್ರರಾದ ಡಾ. ಗುರುರಾಜ್ ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಮೃತದೇಹವನ್ನು ತುಮಕೂರಿನಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ರಿಪ್ಪನ್‌ಪೇಟೆಯ ಸರ್ಕಾರಿ ಆಸ್ಪತೆಯಲ್ಲಿ ಅಂತಿಮ ದರ್ಶನಕ್ಕೆ ತರಲಾಗಿತ್ತು. ಈ ಸಂಧರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವೈದ್ಯರ ಮೃತದೇಹದ ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ : Lovers Suicide: ಪ್ರಿಯಕರನ ಬಿಟ್ಟಿರಲಾಗದೆ ಆತನ ಜತೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Exit mobile version