Site icon Vistara News

Modi in Bangalore : ಪ್ರಧಾನಿ ಮೋದಿ ಸಾಗುವ ದಾರಿಗೆ ಬೈಕ್‌ ನುಗ್ಗಿಸಿದ ಯುವಕ, ಪೊಲೀಸರು ಕಕ್ಕಾಬಿಕ್ಕಿ!

Modi metro

#image_title

ಬೆಂಗಳೂರು: ಏರ್‌ ಶೋ ಉದ್ಘಾಟನೆಗಾಗಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬರುವ ದಾರಿಯಲ್ಲಿ ಒಮ್ಮಿಂದೊಮ್ಮೆಗೇ ಒಬ್ಬ ಯುವಕ ಬೈಕ್‌ನೊಂದಿಗೆ ನುಗ್ಗಿ ಆತಂಕ ಹುಟ್ಟಿಸಿದ ಘಟನೆ ಜರುಗಿತು.

ಮೋದಿ ಅವರು ವಿಮಾನದಿಂದ ಇಳಿದು ರಾಜಭವನಕ್ಕೆ ಬರುವ ದಾರಿಯಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ರಸ್ತೆ ಸಂಚಾರ ತಡೆಯಲಾಗಿತ್ತು. ಈ ನಡುವೆ, ಮೋದಿ ಬರಲು ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ಒಬ್ಬ ಯುವಕ ಬೈಕ್‌ನೊಂದಿಗೆ ರಸ್ತೆಗೆ ನುಗ್ಗಿಬಿಟ್ಟ.

ಕಕ್ಕಾಬಿಕ್ಕಿಯಾದ ಪೊಲೀಸರು ಹೋಗಿ ಆತನನ್ನು ಹಿಡಿದುಕೊಂಡರು. ಪೆಟ್ರೋಲ್ ಖಾಲಿಯಾಗಿದೆ, ಅದಕ್ಕಾಗಿ ಹೋಗುತ್ತಿರುವುದಾಗಿ ಬೈಕ್‌ ಸವಾರ ತಿಳಿಸಿದ. ಸ್ವಲ್ಪ ನಿರಾಳರಾದ ಪೊಲೀಸರು ಆತನನ್ನು ವಾಪಸ್‌ ಕಳುಹಿಸಿ ನಿಟ್ಟುಸಿರು ಬಿಟ್ಟರು.

ಮೆಟ್ರೋ ಪ್ರಯಾಣಿಕರು- ಪೊಲೀಸರ ವಾಗ್ವಾದ

ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಸ್ವಲ್ಪ ಹೊತ್ತು ಮೆಟ್ರೋ ಸಂಚಾರ ಬಂದ್‌ ಆಗಿತ್ತು. ಅಷ್ಟು ಮಾತ್ರವಲ್ಲ, ಎಂ.ಜಿ. ರಸ್ತೆಯಲ್ಲಿ ಓಡಾಟ ಬಂದ್‌ ಮಾಡಲಾಗಿತ್ತು. ಈ ನಡುವೆ ಮೆಟ್ರೋದಲ್ಲಿ ಬಂದಿಳಿದ ಪ್ರಯಾಣಿಕರನ್ನು ಸ್ಟೇಷನ್‌ನಿಂದ ಹೊರಗೆ ಬರಲು ಬಿಡದೆ ಅಲ್ಲೇ ಉಳಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಜಗಳಕ್ಕಿಳಿದರು.

ನಮ್ಮನ್ನು ಹೊರಗೆ ಬಿಡುವಂತೆ ಕೇಳಿ ಪೋಲೀಸರು ಹಾಗೂ ಮೆಟ್ರೋ ಭದ್ರತ ಸಿಬ್ಬಂದಿ ಮೇಲೆ ಪ್ರಯಾಣಿಕರು ಗರಂ ಆದರು. ಸುಮಾರು 20 ನಿಮಿಷಗಳ ಕಾಲ ಕೂಡಿ ಹಾಕಿದ್ದಕ್ಕೆ ಮೆಟ್ರೋ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರು. ಮೋದಿ ಸಾಗಿದ ಬಳಿಕವೇ ಅವರನ್ನು ಹೊರಗೆ ಬಿಡಲಾಯಿತು.

ಇದನ್ನೂ ಓದಿ : Modi at Bangalore : ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ, ರಾತ್ರಿ ರಾಜಭವನದಲ್ಲಿ ವಾಸ್ತವ್ಯ, ಸೋಮವಾರ ಏರ್‌ಶೋಗೆ ಚಾಲನೆ

Exit mobile version