Site icon Vistara News

Youth attacked : ಪ್ರೀತಿಸಿ ಮದುವೆಯಾದ ಯುವಕನಿಗೆ ಯುವತಿ ಮನೆಯವರಿಂದ ಅಟ್ಯಾಕ್

Love Marriage

#image_title

ಧಾರವಾಡ:‌ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ (Love Marriage) ಯುವಕನಿಗೆ ಆಕೆಯ ಮನೆಯವರು ಮಾರಣಾಂತಿಕ ಹಲ್ಲೆ (Youth attacked) ನಡೆಸಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಯುವತಿ ತಾಯಿ ಮನೆ ಸೇರಿದ್ದಾಳೆ. ಅವಳು ಬೇಕೇಬೇಕು ಎಂದು ಹುಡುಗ ಹಠ ಹಿಡಿದಿದ್ದಾನೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ಶಿವನಗೌಡ ಪಾಟೀಲ ಮತ್ತು ಅಕ್ಕಮ್ಮ ಎಂಬವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು (Love case) ಎನ್ನಲಾಗಿದೆ. ಅವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ನಡುವೆ ಅವರಿಬ್ಬರೂ ರಿಜಿಸ್ಟರ್ಡ್‌ ಮದುವೆ ಮಾಡಿಕೊಂಡಿದ್ದಾರೆ. ಇದು ಹುಡುಗಿ ಮನೆಯವರನ್ನು ಕೆರಳಿಸಿದೆ.

ಮದುವೆಯಾದ ಬಳಿಕ ಹುಡುಗಿ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಅಂತಿಮವಾಗಿ ಮನೆಗೆ ಬರುವಂತೆ ಹೇಳಿದ್ದರು. ಈ ವೇಳೆ ಆರಂಭದಲ್ಲಿ ಚೆನ್ನಾಗಿ ಮಾತನಾಡಿ ಬಳಿಕ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹುಡುಗಿ ಮನೆಯವರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಶಿವನಗೌಡ ಇದೀಗ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.

ಪರಸ್ಪರ ಪ್ರೀತಿಸುತ್ತಿದ್ದ ಶಿವನಗೌಡ ಮತ್ತು ಅಕ್ಕಮ್ಮ ಕಳೆದ ಮೇ 31ರಂದು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಕಲಘಟಗಿ ರಿಜಿಸ್ಟರ್ ಆಫೀಸ್ ನಲ್ಲಿ‌ ನೋಂದಣಿ ನಡೆದಿತ್ತು.

ಮದುವೆಯಾದ ಬಳಿಕ ಅಕ್ಕಮ್ಮ ತನ್ನ ಮನೆಗೆ ಹೋಗಿದ್ದಾಳೆ. ಆಗ ಆಕೆಯ ಮೇಲೂ ಮನೆ ಮಂದಿ ಹಲ್ಲೆ ಮಾಡಿದ್ದಾರೆ. ಮತ್ತು ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿದ್ದಾರೆ. ಹೀಗಾಗಿ ಆಕೆಯನ್ನು ಮನೆಯಿಂದ ಕರೆದುಕೊಂಡು ಬರಲು ಹೋಗಿದ್ದೆ. ಈ ವೇಳೆ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎನ್ನುವುದು ಶಿವನಗೌಡ ಮಾಡುತ್ತಿರುವ ಆರೋಪ.

ನಾನು ಆಕೆಯನ್ನು ಕರೆದೊಯ್ಯಲು ಹೋದಾಗ ಅಕ್ಕಮ್ಮನ ಮನೆಯವರು ಕಣ್ಣಿಗೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಇದರ ನಡುವೆ ನನ್ನ ಹೆಂಡತಿಯ ಬ್ರೇನ್‌ ವಾಷ್‌ ಮಾಡಿದ್ದಾರೆ. ನಾನು ಅವಳನ್ನು ಹೆದರಿಸಿ ಮದುವೆ ಆಗಿದ್ದೇನೆ ಎಂದು ಆರೋಪ ಮಾಡ್ತಿದ್ದಾರೆ. ಅವಳು ಕೂಡಾ ಮನೆಯವರಿಗೆ ಹೆದರಿ ಈಗ ನನ್ನ ಜತೆ ಬರುವುದಿಲ್ಲ ಅಂತಿದ್ದಾಳೆʼʼ ಎನ್ನುವ ಶಿವನಗೌಡ ಪಾಟೀಲ, ನನಗೆ ನನ್ನ ಹೆಂಡತಿ ಬೇಕೇ ಬೇಕು ಎನ್ನುತ್ತಿದ್ದಾನೆ.

ಇದನ್ನೂ ಓದಿ Love Failure: ಇದೆಂಥ ಪ್ರೇಮ? ಮನೆಯಲ್ಲಿ ಒಪ್ಪದ್ದಕ್ಕೆ ವಿಷ ಕುಡಿದು ಸ್ಲೀಪರ್ ಕೋಚ್ ಬಸ್ಸಲ್ಲಿ ಮಲಗಿದರು!

Exit mobile version