ಆನೇಕಲ್: ತೆಂಗಿನ ಮರ ಏರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಆನೇಕಲ್ (Anekal News) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ನಾಲ್ವರು ಸ್ನೇಹಿತರ ಜತೆಗೂಡಿ ಹೋಗಿದ್ದ ಯುವಕ, ಜಮೀನೊಂದರಲ್ಲಿ ತೆಂಗಿನ ಮರವೇರಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಚಿನ್ನಯ್ಯನ ಪಾಳ್ಯದ ಮುನಿರಾಜು ಮೃತ ದುರ್ದೈವಿ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮುನಿರಾಜು, ಶುಕ್ರವಾರ ತೆಂಗಿನ ಮರದಿಂದ ಬಿದ್ದಿದ್ದ. ಇದರಿಂದ ಕುತ್ತಿಗೆ, ಬೆನ್ನು, ಕಾಲು ಮುರಿದುಕೊಂಡಿದ್ದರಿಂದ ರಾತ್ರಿಯೆಲ್ಲಾ ನರಳಾಡಿದ್ದಾನೆ. ಬೆಳಗ್ಗೆ ಸ್ಥಳೀಯರು ಗಮನಿಸಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುನಿರಾಜು ಮೃತಪಟ್ಟಿದ್ದಾನೆ.
ಇದನ್ನೂ ಓದಿ | Gadag News: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನಿಸಿದ 6 ಮಂದಿ ಬಂಧನ
ಆಸ್ತಿಗಾಗಿ ಹೆಂಡ್ತಿ ಜತೆಗೂಡಿ ಅಮ್ಮನನ್ನೇ ಕೊಂದು ಬಿಟ್ಟ ನೀಚ!
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರದ ಯರ್ತಿಗಾನಾಹಳ್ಳಿ ಆಸ್ತಿ ವಿಚಾರಕ್ಕೆ (Property Issue) ಗಲಾಟೆ ನಡೆದಿದ್ದು, ದುಷ್ಟ ಮಗನೊಬ್ಬ ಪತ್ನಿಯೊಂದಿಗೆ ಸೇರಿ ದೊಣ್ಣೆಯಿಂದ ತಾಯಿಯನ್ನೇ ಕೊಂದು (Murder case) ಹಾಕಿದ್ದಾನೆ. ಚಿನ್ನಮ್ಮ (60) ಕೊಲೆಯಾದ ದುರ್ದೈವಿ. ರಾಘವೇಂದ್ರ (40), ಸೊಸೆ ಸುಧಾ (38) ಕೊಲೆ ಆರೋಪಿಗಳು
ಇವರೆಲ್ಲರೂ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ನಿವಾಸಿ ಆಗಿದ್ದು, ಕಳೆದ ಅನೇಕ ದಿನದಿಂದ ಜಮೀನು ವಿಚಾರಕ್ಕೆ ಜಗಳ ನಡೆಯುತ್ತಿತ್ತು. ತಾಯಿ ಚಿನ್ನಮ್ಮಳಿಗೆ ತಿಳಿಯದಂತೆ ರಾಘವೇಂದ್ರ ಆಸ್ತಿಯನ್ನು ಬರೆಸಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಜಮೀನಿನಲ್ಲಿ ಸೌದೆ ಮತ್ತು ಪೊರಕೆ ಕಡ್ಡಿ ಕಟಾವಿಗೆ ಬಂದಿದ್ದ ತಾಯಿ ಚಿನ್ನಮ್ಮಳ ಬಳಿ ಬಂದ ರಾಘವೇಂದ್ರ ಕ್ಯಾತೆ ತೆಗೆದಿದ್ದಾನೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಗ ಮತ್ತು ಸೊಸೆ ಇಬ್ಬರು ಸೇರಿ ದೊಣ್ಣೆಯಿಂದ ಚಿನ್ನಮ್ಮಳಿಗೆ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಗಂಭೀರ ಗಾಯಗೊಂಡ ಚಿನ್ನಮ್ಮಳನ್ನು ನಂತರ ತಾವೇ ಆಸ್ಪತ್ರೆಗೆ ಸೇರಿಸುವ ನಾಟಕವನ್ನು ಆಡಿದ್ದಾರೆ. ಆದರೆ ಗಂಭೀರ ಗಾಯಗೊಂಡ ಚಿನ್ನಮ್ಮ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Fraud Case: ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ ವಂಚನೆ; ಬ್ಯಾಂಕ್ ಖಾತೆಯಿಂದ 1.99 ಲಕ್ಷ ರೂ. ದೋಚಿದ ಸೈಬರ್ ಕಳ್ಳರು
ಸ್ಥಳಕ್ಕೆ ಬೆರಳಚ್ಷು ತಂಡ, ದೇವನಹಳ್ಳಿ ಮತ್ತು ಏರ್‌ಪೋರ್ಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಾದ ರಾಘವೇಂದ್ರ ಮತ್ತು ಸುಧಾಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ