ಬಾಗಲಕೋಟೆ: ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ- ಹಳಿಂಗಳಿ ಮಾರ್ಗ ಮಧ್ಯೆ ಮಂಗಳವಾರ ನಡೆದಿದೆ. ತೇರದಾಳ ಪಟ್ಟಣದ ಕಲ್ಲಟ್ಟಿ ನಿವಾಸಿ ಸೈದು ತರತರಿ (30) ಮೃತ ಯುವಕ. ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಸೈದು ತರತರಿ, ತೇರದಾಳದಿಂದ ಪತ್ನಿಯ ಊರು ಹಳಿಂಗಳಿ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ (Bike Accident) ನಡೆದಿದೆ.
ಬೆಳಗಾವಿಯಲ್ಲಿ ತಪ್ಪಿದ ಭಾರಿ ಬೆಂಕಿ ಅನಾಹುತ
ಬೆಳಗಾವಿ: ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಹಾಕಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡ ಕಾರು ಹೊತ್ತಿ ಉರಿದ ಘಟನೆ ಕೊಲ್ಹಾಪುರ ಸರ್ಕಲ್‌ನಲ್ಲಿ ನಡೆದಿದೆ. ಕೂಡಲೇ ಬಂಕ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದರಿಂದ ಭಾರಿ ಅಗ್ನಿ ಅವಘಡ ತಪ್ಪಿದೆ.
ಇದನ್ನೂ ಓದಿ | Love Case : ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು, ಅಪ್ರಾಪ್ತೆ ಚಿಂತಾಜನಕ
ಕಾರಿಗೆ ಬೆಂಕಿ ಹತ್ತುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಬಂಕ್ ನೌಕರ ಮಹಮ್ಮದ್ ಗೌಸ್, ಬೆಂಕಿ ನಂದಕ (ಫೈರ್ ಎಕ್ಸ್‌ಟಿಂಗಿಷರ್) ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಮಕ್ಕಳೂ ಸೇರಿ 5 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವ ಕಾರಣಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂಬುವುದು ತಿಳಿದುಬಂದಿಲ್ಲ.
ತಮಿಳುನಾಡು ರೌಡಿಯನ್ನು ಮುಗಿಸಲು ಬಂದವರು ಬೆಂಗಳೂರು ಪೊಲೀಸರಿಗೆ ಲಾಕ್!
ಬೆಂಗಳೂರು: ಬೆಂಗಳೂರಿನ ಬಾಣಸವಾಡಿಯಲ್ಲಿ ಇತ್ತೀಚೆಗೆ ತಮಿಳುನಾಡಿನ ನಟೋರಿಯಸ್ ರೌಡಿ (Rowdy sheeter) ಮೇಲೆ ದಾಳಿ ನಡೆದಿತ್ತು. ಇದೀಗ ಪ್ರಕರಣ ಭೇದಿಸಿರುವ ಬಾಣಸವಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಟೋರಿಯಸ್ ರೌಡಿಯಾಗಿರುವ ಗುರುಸ್ವಾಮಿ ಮೇಲೆ ವಿರೋಧಿ ಬಣ ಹತ್ಯೆಗೆ ಸ್ಕೆಚ್ ಹಾಕಿ ದಾಳಿ ಮಾಡಿತ್ತು. ಆದರೆ ಗುರುಸ್ವಾಮಿ ಪಾರಾಗಿದ್ದ.
ತಮಿಳುನಾಡಿನ ಮಧುರೈನಲ್ಲಿ ಗುರುಸ್ವಾಮಿ ಹಾಗೂ ರಾಜಪಾಂಡಿಯನ್ ಇಬ್ಬರು ನಟೋರಿಯಸ್ ರೌಡಿಗಳಾಗಿದ್ದರು. ಇವರಿಬ್ಬರು ಎರಡು ತಂಡಗಳನ್ನು ಕಟ್ಟಿಕೊಂಡು ಮಧುರೈನಲ್ಲಿ ಆಗಾಗ ಕೊಲೆ, ಸೂಲಿಗೆ ಮಾಡುತ್ತಿದ್ದರು. ಹೀಗಿದ್ದಾಗ ರಾಜಪಾಂಡಿಯನ್ ಮೃತಪಟ್ಟಿದ್ದ. ರಾಜಪಾಂಡಿಯನ್ ನಿಧನದ ನಂತರ ಕಾಳಿಮುತ್ತು ಎಂಬಾತ ಗುರುಸ್ವಾಮಿ ಹತ್ಯೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದ.
ಇದನ್ನೂ ಓದಿ: Road Accident : ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ
ಮಧುರೈ ಜೈಲಿನಲ್ಲಿರುವ ರಾಜಪಾಂಡಿಯನ್ ಅಣ್ಣನ ಮಗ ಕಾಳಿಮುತ್ತು ಹೇಗಾದರೂ ಮಾಡಿ ಗುರುಸ್ವಾಮಿಯನ್ನು ಮುಗಿಸಿಬಿಡುವ ಪ್ಲ್ಯಾನ್ ಮಾಡುತ್ತಿದ್ದ. ಜೈಲಿನಲ್ಲಿ ಇದ್ದುಕೊಂಡೇ ಗುರುಸ್ವಾಮಿ ಕೊಲೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಐದು ಜನರ ತಂಡ ರಚನೆ ಮಾಡಿ, ರೌಡಿ ಗುರುಸ್ವಾಮಿ ಕೊಲೆಗೆ ಸುಪಾರಿ ನೀಡಿದ್ದ.
ಇತ್ತ ಎದುರಾಳಿಗಳು ತನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದ ಗುರುಸ್ವಾಮಿ ಜೀವ ಭಯದಿಂದ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ಈ ನಡುವೆ ಬೆಂಗಳೂರಿನ ಸೇನಾವಿಹಾರ ಅಪಾರ್ಟ್ಮೆಂಟ್‌ನಲ್ಲಿ ಪ್ಲಾಟ್ ಖರೀದಿಗಾಗಿ ಬಂದಿದ್ದ. ಗುರುಸ್ವಾಮಿ ಬರುವ ಖಚಿತ ಮಾಹಿತಿ ಆಧಾರದ ಮೇಲೆ ಕಾಳಿಮುತ್ತು ತಂಡ ಅಟ್ಯಾಕ್ ಮಾಡಿತ್ತು.
ಇದನ್ನೂ ಓದಿ | Red sanders : ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಪಲ್ಟಿ: ಮೂವರಿಗೆ ಗಂಭೀರ ಗಾಯ, ಹುಬ್ಬಳ್ಳಿಯಲ್ಲಿ ಅಂಗಡಿ ಭಸ್ಮ
ನವೀನ್ ಹಾಗೂ ತುಪಾಕಿ ವಿಜಯ್ ಟೀಮ್ ಸೇರಿ ಅಂದು ಗುರುಸ್ವಾಮಿ ಹತ್ಯೆಗೆ ಮುಂದಾದರೂ, ಆದರೆ ಗುರುಸ್ವಾಮಿ ಅವರಿಂದ ತಪ್ಪಿಸಿಕೊಂಡು ಬದುಕುಳಿದಿದ್ದ. ಇನ್ನು ಗುರುಸ್ವಾಮಿ ಮಧುರೈನಲ್ಲಿ ನಟೋರಿಯಸ್ ಕ್ರಿಮಿನಲ್ ಆಗಿದ್ದ. ಹೀಗಾಗಿ ಗುರುಸ್ವಾಮಿ ಹಾಗೂ ರಾಜಪಾಂಡಿಯನ್ ತಂಡದ ಮೇಲೆ ನಿಗಾ ಇಡಲು ಅಲ್ಲಿನ ಹೈಕೋರ್ಟ್ ವಿಶೇಷ ತಂಡ ರಚನೆ ಮಾಡಿತ್ತು.
ಸದ್ಯ ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗಿದೆ. ವಿನೋದ ಕುಮಾರ್, ಪ್ರಸನ್ನ, ಕಾರ್ತಿಕ್ ಬಂಧಿತ ಆರೋಪಿಗಳಾಗಿದ್ದು, ನವೀನ್ ಹಾಗೂ ತುಪಾಕಿ ವಿಜಯ್‌ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ