Site icon Vistara News

Youth Drowned: ನಾಯಿ ಜತೆ ಆಟವಾಡುತ್ತ ಆಯತಪ್ಪಿ ಬಾವಿಗೆ ಬಿದ್ದ ಬಾಲಕ; ಕೆರೆಯಲ್ಲಿ ಮೀನು ಹಿಡಿಯಲು ಹೋದವ ನೀರು ಪಾಲು

#image_title

ಕಾರವಾರ/ ಆನೇಕಲ್‌: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಂದೂರು ಗ್ರಾಮದಲ್ಲಿ ಬಾವಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ (Youth Drowned) ದುರ್ಘಟನೆ ನಡೆದಿದೆ. ನಾಗಭೂಷಣ ಹೆಗಡೆ (7) ಮೃತ ದುರ್ದೈವಿ.

1ನೇ ತರಗತಿ ಓದುತ್ತಿರುವ ನಾಗಭೂಷಣ ಮನೆಯ ನಾಯಿಯೊಂದಿಗೆ ತೋಟದ ಬಳಿ ಆಟವಾಡುತ್ತಿದ್ದ. ಈ ವೇಳೆ ಆಯತಪ್ಪಿ ತೆರೆದ ಬಾವಿಗೆ ಬಿದ್ದಿದ್ದಾನೆ. ಮಗ ಕಾಣದೇ ಇದ್ದಾಗ ಮನೆಯ ಸುತ್ತಮುತ್ತ ಪೋಷಕರು ಹುಡುಕಾಡಿದ್ದಾರೆ. ಈ ವೇಳೆ ಬಾವಿಯಲ್ಲಿ ನೋಡಿದಾಗ ಮಗು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ.

ವಿಷ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೆರೆಯಲ್ಲಿ ಮುಳುಗಿ ಯುವಕ ಸಾವು

ಕೆರೆಯಲ್ಲಿ ಮೀನು ಹಿಡಿದು ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯ ಕೊಮ್ಮಸಂದ್ರ ಕೆರೆಯಲ್ಲಿ ಮಂಜುನಾಥ್ (24) ಮುಳುಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Children drowned : ಆಟವಾಡುತ್ತಾ ಮೀನು ಹಿಡಿಯಲು ಕಾವೇರಿ ನದಿಗೆ ಹೋದ ಇಬ್ಬರು ಮಕ್ಕಳು ನೀರುಪಾಲು

ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯ ಹಾರೋಹಳ್ಳಿ ನಿವಾಸಿ ಆಗಿರುವ ಮಂಜುನಾಥ್‌ ಕೂಲಿ ಕೆಲಸ ಮಾಡಿಕೊಂಡಿದ್ದರು. ಸ್ನೇಹಿತರ ಜತೆಗೂಡಿ ಪಾರ್ಟಿ ಮಾಡಲು ಬಂದಾಗ ಕೆರೆಯಲ್ಲಿ ಈಜು ಹೋಗಿದ್ದು, ಈ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸೂರ್ಯನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

Exit mobile version