ವಿಜಯನಗರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಂಪಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನಕ್ಕಾಗಿ ಬಂದಿದ್ದ ಯುವಕನೊಬ್ಬ ನೀರು (Youth Drowned) ಪಾಲಾಗಿದ್ದಾನೆ.
ಹುಬ್ಬಳ್ಳಿಯ ವಿನಯ್ (17) ಮೃತ ದುರ್ದೈವಿ. ಈತ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ವಿನಯ್ ಹುಬ್ಬಳ್ಳಿಯ ಗಂಟಿಕೇರಿ ಪ್ರದೇಶದವನು ಎಂದು ಗುರುತಿಸಲಾಗಿದೆ.
ಹೊಸಪೇಟೆ ತಾಲೂಕಿನ ಹಂಪಿ ವೀಕ್ಷಣೆಗೆ ವಿನಯ್ ಕುಟುಂಬಸ್ಥರು ಆಗಮಿಸಿದ್ದರು. ಈ ವೇಳೆ ತುಂಗಭದ್ರಾ ನದಿಗೆ ಸ್ನಾನಕ್ಕಾಗಿ ತೆರಳಿದ್ದಾರೆ. ಈ ವೇಳೆ ವಿನಯ್ ಕಾಲು ಜಾರಿ ಬಿದ್ದು, ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Viral Video | ಪಾಕಿಸ್ತಾನದಲ್ಲಿ ಆಹಾರ ಬಿಕ್ಕಟ್ಟಿನ ಕರಾಳತೆ; ಗೋಧಿ ಹಿಟ್ಟಿನ ಮೂಟೆಗಳಿರುವ ಲಾರಿಯನ್ನು ಬೆನ್ನಟ್ಟಿದ ಜನ