ರಾಮನಗರ: ಕನಕಪುರ ತಾಲೂಕಿನ ಚುಂಚಿ ಫಾಲ್ಸ್‌ನಲ್ಲಿ ಈಜಲು ಹೋಗಿ ಎಂಜಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿದ್ದಾನೆ. ವರುಣ್ (19) ಮೃತಪಟ್ಟ ದುರ್ದೈವಿ. ದೊಡ್ಡಬಳ್ಳಾಪುರದ ದೇವನಹಳ್ಳಿ ತಾಲೂಕಿನಿಂದ ಪ್ರವಾಸಕ್ಕೆಂದು ವರುಣ್ ಸ್ನೇಹಿತರೊಂದಿಗೆ (Youth Drowned) ಬಂದಿದ್ದ.
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಸ್ನೇಹಿತರೊಂದಿಗೆ ಈಜಲು ನೀರಿಗೆ ಇಳಿದಾಗ ಮುಳುಗಿ ಹೋಗಿದ್ದಾರೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಸಾತನೂರು ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road Accident : ಯಮನಂತೆ ಬಂದ ಕಾರಿಗೆ ಬಾಲಕ ಸಾವು; ತಂದೆ- ಮಗಳು ಗಂಭೀರ
ರಸ್ತೆ ದಾಟುವಾಗ ವ್ಯಕ್ತಿ ಮೇಲೆ ಹರಿದ ಕಾರು
ಮಂಗಳೂರು: ವಿಕಲಚೇತನರ ಮೇಲೆ ಕಾರು ಡಿಕ್ಕಿ ಹೊಡೆದಿದೆ. ಕಡಬ ಮುಖ್ಯ ಪೇಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಕಡಬದ ಅಂಗಡಿ ಮನೆ ನಿವಾಸಿ ಧರ್ಣಪ್ಪ ಮೃತ ದುರ್ದೈವಿ.
ಧರ್ಣಪ್ಪ ರಸ್ತೆ ದಾಟಲು ಬದಿಯಲ್ಲಿ ನಿಂತಿದ್ದರು. ಈ ವೇಳೆ ಮುಂಬೈ ಮೂಲದ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಧರ್ಣಪ್ಪನನ್ನು ಕೂಡಲೇ ಆಸತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ಬಾಡಿಗೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಡಬ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬಟ್ಟೆ ಕಳಚಿ ಡ್ಯಾನ್ಸ್ ಮಾಡಿದ್ದ ಹುಡುಗರಿಗೆ ಪೊಲೀಸರು ಕೊಟ್ರು ಶಾಕ್
ನಿನ್ನೆ ಶುಕ್ರವಾರ ಏರ್‌ಪೋರ್ಟ್ ರಸ್ತೆಯಲ್ಲಿ ಕಾರ್ ಮೇಲೆ ಹತ್ತಿ ಕುಣಿದವರಿಗೆ ಈಗ ಸಂಕಷ್ಟ ಎದುರಾಗಿದೆ. ಬಟ್ಟೆ ಕಳಚಿ ಕಾರ್ ಮೇಲೆ ಡ್ಯಾನ್ಸ್ ಮಾಡಿ ರೂಲ್ಸ್ ಬ್ರೇಕ್ ಮಾಡಿದರ ವಿರುದ್ಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎನ್‌ಹೆಚ್ 7ರ ಏರ್‌ಪೋರ್ಟ್ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನ ಸನ್‌ರೂಫ್ ಮತ್ತು ವಿಂಡೋ ಗ್ಲಾಸ್‌ನಿಂದ ಅರ್ಧ ದೇಹವನ್ನು ಹೊರತೆಗೆದು ಕುಣಿದಿದ್ದರು. ಮಾತ್ರ ವಲ್ಲದೆ ಬಟ್ಟೆ ಕಳಚಿ ನಾಲ್ವರು ಯುವಕರು ಪುಂಡಾಟ ಮಾಡಿದ್ದರು. ಕಾರನ್ನು ಅಡ್ಡಾದಿಡ್ಡಿಯಾಗಿ, ವೇಗವಾಗಿ ಓಡಿಸುತ್ತಾ ಇತರೆ ವಾಹನ ಸವಾರರಿಗೂ ಕಿರಿಕಿರಿಯನ್ನುಂಟು ಮಾಡಿದ್ದರು.
ಇದನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಸಾರ್ವಜನಿಕರು ಪ್ರಶ್ನಿಸಿದ್ದರು. ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಸಂಚಾರಿ ಪೊಲೀಸರು ಇಂಡಿಯನ್ ಮೋಟಾರ್ ಸೈಕಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ