Site icon Vistara News

Youth Drowned | ಈಜಾಡಲು ಹೋಗಿ ನೀರು ಪಾಲಾಗಿದ್ದ ಮೂವರು ಯುವಕರು; ಎರಡು ದಿನಗಳ ಬಳಿಕ ಶವ ಪತ್ತೆ

ಹಾವೇರಿ: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದ ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದರು. ಆದರೆ ನೀರಿನ ಒಳಹರಿವು ಹೆಚ್ಚಾಗಿ ಮೂವರು ಯುವಕರು (Youth drowned) ನೀರುಪಾಲಾಗಿದ್ದದರು. ರಾಣೇಬೆನ್ನೂರ ತಾಲೂಕಿನ ಮುದೇನೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ತೀವ್ರ ಶೋಧ ಕಾರ್ಯ ನಡೆಸಿದ ಎರಡು ದಿನಗಳ ಬಳಿಕ ಅವರ ಶವಗಳು ಪತ್ತೆಯಾಗಿವೆ.

ರಾಣೇಬೆನ್ನೂರ ನಗರ ನಿವಾಸಿಗಳಾದ ನವೀನ ಕೂರಗುಂದ (೨೦), ವಿಕಾಶ ಪಾಟೀಲ್ (20), ಪ್ರಮೋದ (25) ನೀರುಪಾಲಾದ ಯುವಕರು. ಜನವರಿ ಒಂದರ ಸಂಜೆಯ ಹೊತ್ತಿಗೆ ಈ ಯುವಕರು ನದಿ ದಂಡೆಗೆ ತೆರಳಿದ್ದು, ರಾತ್ರಿಯಾದರೂ ಯಾಕೆ ಮರಳಲಿಲ್ಲ ಎಂದು ಹುಡುಕಲು ಶುರು ಮಾಡಿದಾಗ ಅವರ ಬಟ್ಟೆಗಳು ನದಿ ತೀರದಲ್ಲಿ ಪತ್ತೆಯಾಯಿತು. ಈ ವೇಳೆ ಯುವಕರು ನದಿಯಲ್ಲಿ ಈಜಲು ತೆರಳಿ ಕಣ್ಮರೆಯಾಗಿ ಇರಬಹುದೆಂದು ಅಂದಾಜಿಸಿ, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಯಿಂದ ತುಂಗಭದ್ರಾ ನದಿಯಲ್ಲಿ ಮೂವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.

ಮಂಗಳವಾರ (ಜ.3) ಮುಂಜಾನೆ ಮುದೇನೂರು ಗ್ರಾಮದ ನದಿ ನೀರಲ್ಲಿ ಯುವಕರ ಶವಗಳು ಪತ್ತೆ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Siddheshwar swamiji | ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ ಎಂದು ಮನವಿ ಮಾಡಿದ ಸಿಎಂ ಬೊಮ್ಮಾಯಿ

Exit mobile version