Site icon Vistara News

Youth drowned : ಕತ್ತಲಲ್ಲಿ ಮೀನು ಹಿಡಿಯಲು ಹೋದ ಯುವಕರ ಸಾವು!

youth drowned in kadaba lake

ತುಮಕೂರು : ಮೀನು ಹಿಡಿಯಲು ಹೋದ ಯುವಕರಿಬ್ಬರು ಕಡಬ ಕೆರೆಯಲ್ಲಿ (Kadaba lake) ಮುಳುಗಿ (Youth Drowned) ಮೃತಪಟ್ಟ ಘಟನೆ ನಡೆದಿದೆ. ತುಮಕೂರಿನ (Tumkur News) ಗುಬ್ಬಿ ತಾಲೂಕಿನ ಆಡುಗೊಂಡನಹಳ್ಳಿಯ ಹರೀಶ್(31), ಯೋಗೀಶ್ (36) ಮೃತ ದುರ್ದೈವಿಗಳು.

ಕಳೆದ ರಾತ್ರಿ (ಜು.22) ಹರೀಶ್‌ ಹಾಗೂ ಯೋಗೀಶ್‌ ಜತೆಯಾಗಿ ಕಡಬ ಕೆರೆ ಸಮೀಪ ಹೋಗಿದ್ದಾರೆ. ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಕೆರೆಯಲ್ಲಿ ನೀರು ಹೆಚ್ಚಾಗಿದ್ದು ಮೇಲಕ್ಕೆ ಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಮಕ್ಕಳಿಬ್ಬರು ರಾತ್ರಿ ಮನೆಗೆ ಬಾರದೆ ಇದ್ದಾಗ ಪೋಷಕರು ಹುಡುಕಾಡಿದ್ದಾರೆ. ಭಾನುವಾರ ಮುಂಜಾನೆ ಕೆರೆಯಲ್ಲಿ ಯುವಕರ ಮೃತದೇಹವು ಪತ್ತೆ ಆಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಸತತ ಪ್ರಯತ್ನದಿಂದಾಗಿ ಕೆರೆಯಲ್ಲಿ ಮುಳುಗಿದ್ದ ಎರಡು ದೇಹಗಳನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Rain News : ಕಾಫಿನಾಡಲ್ಲಿ ಮಳೆ ಅಬ್ಬರ; ಹಾನಿ ಭಯಂಕರ, ಜನ ತತ್ತರ

ತಗ್ಗು ಗುಂಡಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಕಲಬುರಗಿ: ತಗ್ಗು ಗುಂಡಿಯಲ್ಲಿ‌ ನಿಂತಿದ್ದ ಮಳೆ‌ ನೀರಲ್ಲಿ (Rain News) ಬಿದ್ದು ಬಾಲಕರಿಬ್ಬರು ದುರ್ಮರಣ ಹೊಂದಿದ್ದಾರೆ. ಅಭಿ (11), ಅಜಯ್ (12) ಮೃತ ದುರ್ದೈವಿಗಳು. ಕಲಬುರಗಿ (Kalaburagi News) ‌ನಗರದ ದುಬೈ ಕಾಲೋನಿಯ ಕಲಬುರಗಿ ‌ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ನಡೆದಿದೆ.

ಅಭಿ ಹಾಗೂ ಅಜಯ್‌ ಮೃತ ದುರ್ದೈವಿಗಳು

ಮಂಟಪದ ಬಳಿ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಇದಕ್ಕಾಗಿ ನೀರಿನ ಟ್ಯಾಂಕ್ ಸುತ್ತಮುತ್ತ 15 ಅಡಿ ಗುಂಡಿ ತೋಡಲಾಗಿತ್ತು. ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ಇದರ ಅರಿವು ಇರದ ಅಭಿ ಹಾಗೂ ಅಜಯ್‌ ಗುಂಡಿ ಬಳಿ ಬಂದಿದ್ದಾರೆ. ಈ ವೇಳೆ ಕಾಲು ಜಾರಿ ಗುಂಡಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಶನಿವಾರ ಮಧ್ಯಾಹ್ನದಿಂದಲೇ ಈ ಇಬ್ಬರು ಬಾಲಕರು ನಾಪತ್ತೆ ಆಗಿದ್ದರು. ಪೋಷಕರು ರಾತ್ರಿಯಿಡಿ ಹುಡುಕಾಡಿದರೂ ಬಾಲಕರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಭಾನುವಾರ ಬೆಳಗ್ಗೆ ಗುಂಡಿಯಲ್ಲಿ ಓರ್ವ ಬಾಲಕನ ಮೃತದೇಹವು ಪತ್ತೆ ಆಗಿದ್ದು ವಿಚಾರ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತೊಬ್ಬನ ಬಾಲಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version