ಮೈಸೂರು, ಕರ್ನಾಟಕ: ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ (H D Kote) ಬುಡಕಟ್ಟು ಜನಾಂಗದ 20 ವರ್ಷದ ಯುವಕನೊಬ್ಬ ಐವರಿ ಕೋಸ್ಟ್‌ನಲ್ಲಿ (ivory coast) ಮಲೇರಿಯಾದಿಂದ (malaria) ಮೃತಪಟ್ಟಿದ್ದಾರೆ. ಶವವನ್ನು ನೀಡಲು ನೀಡಲು ಅಲ್ಲಿನ ಆಸ್ಪತ್ರೆಯವರು ಹತ್ತು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಯುವಕನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಮೃತ ಯುವಕನನ್ನು ಇಫ್ರಿಯಾಂ ಗುರುತಿಸಲಾಗಿದೆ. ಈತ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವನಾಗಿದ್ದಾರೆ. ತೈಲ ಮಾರಾಟ ಮತ್ತು ಬಾಡಿ ಮಸಾಜ್‌ರ ಆಗಿ ತಮ್ಮ ಮಗ ಕಳೆದ ವರ್ಷ ಐವರಿ ಕೋಸ್ಟ್‌ಗೆ ತೆರಳಿದ್ದ ಎಂದು ಯುವಕನ ತಾಯಿ ಹೇಳಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಟರ್ಕಿ ಭೂಕಂಪ ಪೀಡಿತರಿಗೆ ನೆರವು; ಮತ್ತೊಮ್ಮೆ ಜಗದ ಹೃದಯ ಗೆದ್ದ ಭಾರತ
ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಯುವಕ ಮೃತಪಟ್ಟಿದ್ದಾನೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಆತ ಹೈಡೋಸ್ ಇಂಜೆಕ್ಷನ್‌ನಿಂದ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ. 10 ಲಕ್ಷದಷ್ಟು ದೊಡ್ಡ ಮೊತ್ತದ ಹಣವನ್ನು ನೀಡುವ ಸ್ಥಿತಿಯಲ್ಲಿ ಕುಟುಂಬ ಇಲ್ಲ. ಹೀಗಾಗಿ, ಐವರಿ ಕೋಸ್ಟ್‌ನಿಂದ ತಮ್ಮ ಮಗನ ಶವವನ್ನು ವಾಪಸ್ ತರುವ ಕುರಿತು ತಾಯಿ ಚಿಂತಿತರಾಗಿದ್ದಾರೆ.