ಹಾವೇರಿ: ತುಂಗಭದ್ರಾ ನದಿಯಲ್ಲಿ ಕೈಕಾಲು ತೊಳೆಯುವಾಗ ಯುವಕ ಕೊಚ್ಚಿ ಹೋಗಿರುವ ಘಟನೆ (Man Drowns in River) ರಾಣಿಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಬಳಿ ನಡೆದಿದೆ. ಮಂಜುನಾಥ ಬಸವರಾಜ ಆನಂದಿ (27) ಮೃತ. ಯುವಕನ ಮೃತದೇಹಕ್ಕಾಗಿ ಅಗ್ನಿಶಾಮಕದಳ ಶೋಧಕಾರ್ಯ ನಡೆಸುತ್ತಿದೆ. ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು-ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ ಎಇಇ ಸಾವು
ಹಾಸನ: ಕಾರು-ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ ಸಕಲೇಶಪುರದ ಲೋಕೋಪಯೋಗಿ ಇಲಾಖೆ ಎಇಇ ಮೃತಪಟ್ಟಿರುವುದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದ ಸಮೀಪ ನಡೆದಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಹಾಸನ ಕಡೆ ಬರುತ್ತಿದ್ದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ | Rain News: ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಸಾವು; ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಮೋಹನ್ ಕುಮಾರ್ (58) ಮೃತ ದುರ್ದೈವಿ. ಕಾರಿನಲ್ಲಿ ಬೆಂಗಳೂರು ಕಡೆಗೆ ಎಇಇ ಮೋಹನ್ ಕುಮಾರ್ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.