Site icon Vistara News

Actor Darshan: ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ! ಜ್ಯೋತಿಷಿ ಆರ್ಯವರ್ಧನ್ ಭವಿಷ್ಯ

Actor Darshan

ಬೆಂಗಳೂರು: ಸ್ಯಾಂಡಲ್ ವುಡ್‌ನ ಕುಖ್ಯಾತ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಹತ್ಯೆ (Renukaswamy) ಪ್ರಕರಣದ ಆರೋಪ ಹೊತ್ತು ಬಂಧನದಲ್ಲಿದ್ದಾರೆ. ಈ ಕೇಸ್‌ಗೆ (case) ಸಂಬಂಧಪಟ್ಟ ತನಿಖೆ ತೀವ್ರ ಹಂತದಲ್ಲಿದೆ. ಈ ನಡುವೆ ಇದೀಗ ನಟ ದರ್ಶನ್(Actor Darshan) ಅವರಿಗೆ ರಾಜಯೋಗ ಕೂಡಿ ಬರಲಿದೆ ಎಂದು ಜ್ಯೋತಿಷಿಗಳೊಬ್ಬರು ಭವಿಷ್ಯವಾಣಿ ನುಡಿದಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ನಟ ದರ್ಶನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕೆಲವು ಅಭಿಮಾನಿಗಳು ದರ್ಶನ್ ಪರವಾಗಿ ನಿಂತರೆ, ಹಲವು ಅವರ ಹೀನ ಕೃತ್ಯಕ್ಕೆ ಟೀಕೆ ಮಾಡಿದ್ದಾರೆ.

ಇಂತಹ ವಿವಾದದ ಮಧ್ಯೆ ಸಿಲುಕಿಕೊಂಡು ಸೆಣಸಾಡುತ್ತಿರುವ ನಟ ದರ್ಶನ್ ಅವರಿಗೆ ಇದೀಗ ಜ್ಯೋತಿಷಿ ಆರ್ಯವರ್ಧನ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಜ್ಯೋತಿಷ್ಯದಲ್ಲಿ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಜ್ಯೋತಿಷಿ ಆರ್ಯವರ್ಧನ್ ನಟ ದರ್ಶನ್ ಬಗ್ಗೆ ಆಶ್ಚರ್ಯದಾಯಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ನಟ ದರ್ಶನ್ ಅವರ ಹೆಸರು ಮತ್ತು ಜನ್ಮ ದಿನಾಂಕವನ್ನು ಗಣನೆಗೆ ತೆಗೆದುಕೊಂಡ ಗುರೂಜಿ ಸಂಖ್ಯಾಶಾಸ್ತ್ರದ ಪ್ರಕಾರ ಅವರ ಜನ್ಮ ದಿನಾಂಕವನ್ನು ವಿರೋಧಿಸುವ ಸಂಖ್ಯೆ 21ರೊಂದಿಗೆ ಹೋಲಿಕೆ ಮಾಡಿದರೆ ಅವರಿಗೆ ದರ್ಶನ್ ಹೆಸರು ಮಂಗಳಕರವಲ್ಲ. ಇದರಿಂದ ಅವರು ಜೀವನದಲ್ಲಿ ಅನೇಕ ಸವಾಲುಗಳನ್ನು ಮತ್ತು ಅಶಾಂತಿಯನ್ನು ಎದುರಿಸುತ್ತಾರೆ ಎಂದು ತಿಳಿಸಿದ್ದಾರೆ.

ಹಾಗೇ ದರ್ಶನ್ ಅವರ ಆರೋಗ್ಯ , ಸಂಬಂಧಗಳು ಮತ್ತು ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ಆರ್ಯವರ್ಧನ್ ಅವರು ಅವರ ಜಾತಕದಲ್ಲಿ ‘ರಾಹು ಭುಕ್ತಿ’ ಅವಧಿಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೇ ಅವರು ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ದರ್ಶನ್ ಅವರು ಶುಕ್ರನ ದೆಸೆಯಿಂದ ಜೀವನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒಳಗಾಗಬಹುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Hamare Baarah: ವಿವಾದಾತ್ಮಕ ಚಿತ್ರ ‘ಹಮಾರೆ ಬಾರಾ’ ಬಿಡುಗಡೆಗೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಆದರೆ ದರ್ಶನ್ ಅವರ ಜಾತಕದ ಪ್ರಕಾರ ಶನಿಯು ಉತ್ತಮ ಸ್ಥಾನದಲ್ಲಿರುವ ಕಾರಣ ಅವರು ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವಂತಹ ಗುಣಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ಭವಿಷ್ಯದಲ್ಲಿ ಶಾಸಕ ಅಥವಾ ಸಚಿವರಾಗಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಹಾಗೇ ದರ್ಶನ್ ಜಾತಕದಲ್ಲಿ ಶನಿಯು 19 ವರ್ಷಗಳ ಸಂಕ್ರಮಣದೊಂದಿಗೆ ರಾಜಯೋಗ ರಚನೆಯಾಗಲಿದ್ದು, ಇದರಿಂದ ಅವರಿಗೆ ರಾಜಕೀಯದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದ್ದಾರೆ.

Exit mobile version