Site icon Vistara News

Amith shah: ಅಮಿತ್ ಶಾ ಒಟ್ಟು ಆಸ್ತಿ ಎಷ್ಟು? ಅವರ ಆದಾಯದ ಮೂಲ ಯಾವುದು?

Amit shah

ಗಾಂಧಿನಗರ: ಲೋಕಸಭಾ ಚುನಾವಣೆ 2024ರಲ್ಲಿ (loksabha election-2024) ಗಾಂಧಿನಗರದಿಂದ (gandhinagar) ಕಣಕ್ಕೆ ಇಳಿದಿರುವ ಕೇಂದ್ರ ಗೃಹ ಸಚಿವ (central home minister) ಅಮಿತ್ ಶಾ (Amith shah) ಅವರು ತಮಗೆ ಸಂಸದ (MP) ಸ್ಥಾನಕ್ಕಾಗಿ ನೀಡುವ ಸಂಬಳ, ಮನೆ ಮತ್ತು ಜಮೀನು ಬಾಡಿಗೆ ಮತ್ತು ಕೃಷಿಯಿಂದ ಆದಾಯ ಬರುತ್ತಿರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಅಮಿತ್ ಶಾ ಅವರು ಶುಕ್ರವಾರ ಗಾಂಧಿನಗರ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಮಾಜಿ ಬಿಜೆಪಿ ಅಧ್ಯಕ್ಷರು, ಪ್ರಸ್ತುತ ಕೇಂದ್ರ ಗೃಹ ಸಚಿವರು ಮತ್ತು ಮೋದಿ ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತ್ ಶಾ ಅವರು ತಮ್ಮ ನಾಮನಿರ್ದೇಶನದಲ್ಲಿ 2024ರಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯ 36 ಕೋಟಿ ರೂ. ಎಂದು ತಿಳಿಸಿದ್ದಾರೆ.

ಶಾ ಬಳಿ ಕಾರು ಇಲ್ಲ

ಅಮಿತ್ ಶಾ ಅವರು ಸ್ವಂತ ಕಾರು ಹೊಂದಿಲ್ಲ. ಕೈಯಲ್ಲಿ ಕೇವಲ 24,000 ರೂ. ನಗದು ಹೊಂದಿರುವುದಾಗಿ ತಿಳಿಸಿದ್ದಾರೆ. 20 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 16 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿರುವುದಾಗಿ ಶಾ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಂಡಿಯಾ ಒಕ್ಕೂಟದವರಿಂದ ಕುಟುಂಬ ರಾಜಕಾರಣ, ಉಳಿದವರು ಗಂಟೆ ಬಾರಿಸಬೇಕಾ? ಜೆ.ಪಿ. ನಡ್ಡಾ ಖಡಕ್‌ ಪ್ರಶ್ನೆ

ಅಮಿತ್ ಶಾ ಅವರ ಬಳಿ 72 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪತ್ನಿ ಸೋನಲ್ ಶಾ ಅವರ ಬಳಿ 1.10 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದೆ. ಸೋನಾಲ್ ಶಾ ಅವರು 31 ಕೋಟಿ ರೂ. ಗೂ ಅಧಿಕ ಆಸ್ತಿ ಹೊಂದಿದ್ದು, 22.46 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 9 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ.

ಒಟ್ಟು ಆಸ್ತಿ ಮೌಲ್ಯ 65.67 ಕೋಟಿ ರೂ.

ಶಾ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿಯ ಒಟ್ಟು ಆಸ್ತಿ ಮೌಲ್ಯ 65.67 ಕೋಟಿ ರೂ.

ಐದು ವರ್ಷಗಳಲ್ಲಿ ಆದಾಯ ದ್ವಿಗುಣ

2019ರ ಅಂಕಿ ಅಂಶದ ಪ್ರಕಾರ ಅಮಿತ್ ಶಾ ಅವರ ಒಟ್ಟು ಆಸ್ತಿ ಮೌಲ್ಯ 30.49 ಕೋಟಿ ರೂ. ಗಳಷ್ಟಿತ್ತು. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ ಎಂದು ಸೂಚಿಸುತ್ತದೆ.

ಒಟ್ಟು 42 ಲಕ್ಷ ಸಾಲ

ಗೃಹ ಸಚಿವ ಅಮಿತ್ ಶಾ ಅವರು 15.77 ಲಕ್ಷ ರೂ. ವೈಯಕ್ತಿಕ ಸಾಲ ಮತ್ತು ಅವರ ಪತ್ನಿ 26.32 ಲಕ್ಷ ರೂ. ಸಾಲ ಹೊಂದಿದ್ದಾರೆ.

ಆದಾಯದ ಮೂಲ

2022-23ರ ಆರ್ಥಿಕ ವರ್ಷದಲ್ಲಿ ಅಮಿತ್ ಶಾ ಅವರ ವಾರ್ಷಿಕ ಆದಾಯ 75.09 ಲಕ್ಷ ರೂ. ಗಳಾಗಿದ್ದರೆ, ಅವರ ಪತ್ನಿಯ ವಾರ್ಷಿಕ ಆದಾಯ 39.54 ಲಕ್ಷ ರೂ. ಅವರ ಆದಾಯದ ಮೂಲಗಳಲ್ಲಿ ಸಂಸದರಾಗಿ ಅವರ ಸಂಬಳ, ಆಸ್ತಿಗಳಿಂದ ಬಾಡಿಗೆ ಆದಾಯ, ಕೃಷಿ ಗಳಿಕೆ ಮತ್ತು ಷೇರು ಮತ್ತು ಲಾಭಾಂಶಗಳಿಂದ ಬರುವ ಆದಾಯ ಸೇರಿವೆ.

ಮೂರು ಕ್ರಿಮಿನಲ್ ಪ್ರಕರಣ

ಅಮಿತ್ ಶಾ ಅವರು ಅಫಿಡವಿಟ್‌ನಲ್ಲಿ ತಮ್ಮ ವೃತ್ತಿಯನ್ನು ರೈತ ಮತ್ತು ಸಮಾಜ ಸೇವಕ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಮೂರು ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದ್ದಾರೆ.

ಮೇ 2ರಂದು ಚುನಾವಣೆ

ಲೋಕಸಭೆ ಚುನಾವಣೆಯ ಮೂರನೇ ಹಂತದ ಅವಧಿಯಲ್ಲಿ ಗಾಂಧಿನಗರ ಸೇರಿ ಗುಜರಾತ್‌ನ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೇ 7ರಂದು ಚುನಾವಣೆ ನಡೆಯಲಿದೆ.

Exit mobile version